

ಮುಂಬೈ: ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2; ದಿ ರೂಲ್ ಡಿಸೆಂಬರ್ 5ರಂದು ಬಿಡುಗಡೆಯಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾವು ರಿಲೀಸ್ ಆದ ಮೊದಲ ದಿನದಿಂದಲ್ಲೂ ಗಲ್ಲಾಪಟ್ಟಿಗೆಯಲ್ಲಿ ಸಖತ್ ಸದ್ದು ಮಾಡ್ತಿದೆ. ಈ ಮಧ್ಯೆ ಬಾಲಿವುಡ್ ಆ್ಯಂಗ್ರಿ ಯಂಗ್ಮ್ಯಾನ್ ಅಮಿತಾಭ್ ಬಚ್ಚನ್(Amitabh Bachchan) ಅಲ್ಲು ಅರ್ಜನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಸಿನಿಮಾ ಪ್ರಚಾರದ ವೇಳೆ ಅಲ್ಲು ಅರ್ಜುನ್ ಅವರಿಗೆ ಬಾಲಿವುಡ್ನಲ್ಲಿ ಯಾವ ನಟನಿಂದ ನೀವು ಸ್ಫೂರ್ತಿ ಪಡೆಯುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಲ್ಲು ಅರ್ಜುನ್ ದೇಶದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ನನ್ನಗೆ ಹೆಚ್ಚು ಪ್ರೇರೇಪಿಸುತ್ತಾರೆ ಎಂದು ಹೇಳಿದ್ದಾರೆ. ಏಕೆಂದರೆ ಇಷ್ಟು ವರ್ಷದ ಅವರ ವೃತ್ತಿಜೀವನ, ನಾವು ಬಾಲ್ಯದಿಂದಲೂ ಅವರ ಸಿನಿಮಾ ನೋಡುತ್ತಾ ಬೆಳೆದಿದ್ದೇವೆ. ಅವರ ಸಿನಿಮಾಗಳು ನಮ್ಮ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ.
ಅವರಿಗೆ ವಯಸ್ಸಾಗಿದೆಯೆಂದು ಹೇಳುತ್ತಿಲ್ಲ. ಇಷ್ಟು ವಯಸ್ಸಿನಲ್ಲೂ ಅವರು ಕೆಲಸ ಮಾಡುವ ರೀತಿ..60,70,80 ಎಷ್ಟೆ ವಯಸ್ಸಾದರೂ ಅವರ ರೀತಿಯಲ್ಲೆ ಇರಬೇಕು ಎಂದೆನಿಸುತ್ತದೆ ಎಂದು ತಿಳಿಸಿದರು. ಸದ್ಯ ಈ ವಿಡಿಯೋವನ್ನು ಅಮಿತಾಭ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಟ್ಯಾಗ್ ಮಾಡಿ ಅಲ್ಲು ಅರ್ಜುನ್ ಅವರಿಗೆ ಕೃತಜ್ಞತೆ ಹೇಳಿದ್ದಾರೆ.
ಅಲ್ಲು ಅರ್ಜುನ್ ಜೀ... ನಿಮ್ಮ ಒಳ್ಳೆಯ ಮಾತುಗಳಲ್ಲಿ ಮುಳುಗಿದ್ದೇನೆ. ನೀವು ನನಗೆ ಅರ್ಹತೆಗಿಂತ ಹೆಚ್ಚಿನದನ್ನು ನೀಡುತ್ತೀರಿ. ನಾವೆಲ್ಲರೂ ನಿಮ್ಮ ಕೆಲಸ ಮತ್ತು ಪ್ರತಿಭೆಯ ದೊಡ್ಡ ಅಭಿಮಾನಿಗಳು. ನೀವು ನಮಗೆ ಸ್ಫೂರ್ತಿ ನೀಡುತ್ತಿರಿ. ನಿಮ್ಮ ಯಶಸ್ಸಿಗೆ ನನ್ನ ಪ್ರಾರ್ಥನೆ ಮತ್ತು ಶುಭಾಶಯಗಳು!' ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಈ ವರ್ಷ ಅಮಿತಾಬ್ ಬಚ್ಚನ್ ಅವರು 'ಕಲ್ಕಿ 2898 AD' ನಲ್ಲಿ ಕಾಣಿಸಿಕೊಂಡರು. ಆ ಸಿನಿಮಾದಲ್ಲಿನ ಅವರ ಅದ್ಭುತ ಸಾಹಸ ದೃಶ್ಯಗಳಿಗೆ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಿನಿಮಾದಲ್ಲಿ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಕೂಡ ಕಾಣಿಸಿಕೊಂಡಿದ್ದರು. ಬಳಿಕ ತಮಿಳಿನಲ್ಲಿ ಅವರು ಮೊದಲ ಸಿನಿಮಾ ರಜನಿಕಾಂತ್ ಜತೆ ವೆಟ್ಟೈಯಾನ್ ಸಿನಿಮಾದಲ್ಲೂ ಬಿಗ್ಬಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)