ಲಾಕ್​ಡೌನ್​ನಿಂದ ದುಬೈನಲ್ಲಿ ಉಳಿದಿರುವ ಸೋನು ನಿಗಮ್​ ಅವರ ಹಳೆ ಟ್ವೀಟ್​ ಟ್ರೋಲ್​ ಮಾಡಿ ಕಾಲೆಳೆಯುತ್ತಿರುವ ನೆಟ್ಟಿಗರು

sonu nigam
Published on

ದೆಹಲಿ: ಲಾಕ್​ ಡೌನ್​ ಹಿನ್ನೆಲೆಯಲ್ಲಿ ಸದ್ಯ ಪತ್ನಿ ಹಾಗೂ ಮಗನೊಂದಿಗೆ ದುಬೈನಲ್ಲೇ ಉಳಿದಿರುವ ಬಾಲಿವುಡ್​ನ ಖ್ಯಾತ ಗಾಯಕ ಸೋನು ನಿಗಮ್​ ಅವರು 2017ರಲ್ಲಿ ಮಾಡಿದ್ದ ಟ್ವೀಟ್​ ಅನ್ನು ಪುನಾರವರ್ತಿಸಿ ನೆಟ್ಟಿಗರು ಅದನ್ನು ಟ್ರೋಲ್​ ಮಾಡಿ ಅವರ ಕಾಲೆಳೆಯುತ್ತಿದ್ದಾರೆ.

ದುಬೈಗೆ ತೆರಳಿದ್ದ ಸೋನು ನಿಗಮ್​ ಕುಟುಂಬ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸದಸ್ಯ ದುಬೈನಲ್ಲಿ ಇದೆ. ಅವರ ತಂದೆ ಹಾಗೂ ಸಹೋದರಿ ಮುಂಬೈನಲ್ಲಿ ಇದ್ದಾರೆ. 2017ರ ಏಪ್ರಿಲ್​ 17ರಂದು ಟ್ವೀಟ್​ ಮಾಡಿದ ಅವರು ಅಜಾನ್​ ಕೂಗುವುದರಿಂದ ಮುಸ್ಲಿಂ ಅಲ್ಲದವರಿಗೆ ತೊಂದರೆಯಾಗುತ್ತದೆ. ಮೈಕ್​ನ ಕೆಟ್ಟ ಧ್ವನಿಯಿಂದ ಬಹುತೇಕ ಮಂದಿಯ ನಿದ್ದೆ ಹಾಳಾಗುತ್ತದೆ. ಅಜಾನ್​ ಕೂಗುವುದರಿಂದ ಎಲ್ಲರೂ ಎಚ್ಚರಗೊಳ್ಳುತ್ತಾರೆ. ದೇಶದಲ್ಲಿ ಇರುವ ಬಲವಂತ ಧಾರ್ಮಿಕ ಪ್ರವೃತ್ತಿ ಇದು ಎಂದು ಟ್ವೀಟ್​ ಮಾಡಿದ್ದರು. ಇದು ವಿವಾದಕ್ಕೆ ತಿರುಗಿತ್ತು.

ಈ ಹಳೆಯ ಟ್ವೀಟ್​ನ ಸ್ಕ್ರೀನ್​ ಶಾಟ್​ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿ ಕೆಲವರು ಸೋನು ನಿಗಮ್​ ಅವರ ಕಾಲೆಳೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net