ಕಾರು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸೋನು ನಿಗಮ್‌! Sonu Nigam ವಿಡಿಯೋ ನೋಡಿ..

sonu nigam
Published on

Sonu Nigam :  ಭಾರತದ ಅತ್ಯಂತ ಜನಪ್ರಿಯ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್ ಅವರು ಸೋಮವಾರ ಸಂಜೆ ಮುಂಬೈನ ಬೀದಿಗಳಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೊರಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.  ಈ ವೇಳೆ  ತಕ್ಷಣ ಎಚ್ಚರಿತುಕೊಂಡು ದೊಡ್ಡ ಅಪಘಾತದಿಂದ ಪಾರಾಗಿದ್ದಾರೆ.   ಈ ಘಟನೆಯ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೀಡಿಯೊದಲ್ಲಿ ಏನಿದೆ?:

ಸೋನು ನಿಗಮ್​ ಅವರು ತನ್ನ ಬಾಡಿಗಾರ್ಡ್​ ಜತೆ ಮುಂಬೈನ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸೋನು ಅವರ ಪಕ್ಕದಲ್ಲಿಯೇ ಇದ್ದ ಕಾರು ಮುಂದೆಯೇ  ಚಲಿಸಲು ಪ್ರಾರಂಭಿಸಿತು. ನಂತರ ಕಾರು ಸೋನುಗೆ ಡಿಕ್ಕಿ ಹೊಡೆದಿದೆ, ಆದರೆ ಅವನು ಬೇಗನೆ ಪಕ್ಕಕ್ಕೆ ಸರಿದಿದ್ದಾರೆ. ಜತೆಯಲ್ಲಿಯೇ ಇದ್ದ ಸಿಬ್ಬಂದಿ ಕೂಡ ಅವನ ರಕ್ಷಣೆಗೆ ಬಂದರು, ಆದರೆ ಸೋನು ಅವರು ಒಂದು ಕ್ಷಣ ಭಯಕ್ಕೆ ಒಳಗಾದಂತೆ ವರ್ತಿಸುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಮತ್ತೆ ಶಾಂತರಾಗಿ ಅಲ್ಲಿಂದ ಹೊರಟುಹೋದರು.

ಈ ವಿಡಿಯೋವನ್ನು ಅಲ್ಲಿಯೇ ಇದ್ದ ಪಾಪರಾಜಿ ಫೋಟೋಗ್ರಾಫರ್​ಗಳು ಸೇರೆ ಹಿಡಿದಿದ್ದಾರೆ. ಈ ವೀಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net