ಸೊಣ್ಣಮ್ಮಗೆ 106ನೇ ಹುಟ್ಟುಹಬ್ಬದ ಸಂಭ್ರಮ; ಆರು ತಲೆಮಾರು ಕಂಡ ಅಜ್ಜಿ

ಕೋಲಾರ ತಾಲೂಕಿನ ಕೊಳಗಂಜನಹಳ್ಳಿಯಲ್ಲಿ 106ವರ್ಷದ ಅಜ್ಜಿ ಸೊಣ್ಣಮ್ಮ 6 ತಲೆಮಾರಿನ ಮಕ್ಕಳು, ಮೊಮ್ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.
ಕೋಲಾರ ತಾಲೂಕಿನ ಕೊಳಗಂಜನಹಳ್ಳಿಯಲ್ಲಿ 106ವರ್ಷದ ಅಜ್ಜಿ ಸೊಣ್ಣಮ್ಮ 6 ತಲೆಮಾರಿನ ಮಕ್ಕಳು, ಮೊಮ್ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.
Published on

 ಕೋಲಾರ: ತಾಲೂಕಿನ ಕೊಳಗಂಜನಹಳ್ಳಿಯಲ್ಲಿ ಆರು ತಲೆಮಾರುಗಳ ಕುಟುಂಬದೊಂದಿಗೆ ಇಂದಿಗೂ ಆರೋಗ್ಯದಿಂದ ಓಡಾಡಿಕೊಂಡಿರುವ ಸೊಣ್ಣಮ್ಮ ಅವರ 106ನೇ ಹುಟ್ಟುಹಬ್ಬ ಭಾನುವಾರ ಅವರ ಸ್ವಗೃಹದಲ್ಲಿ ನೆರವೇರಿತು. 70ಕ್ಕೂ ಹೆಚ್ಚು ಕುಟುಂಬಸ್ಥರು ಸಂಭ್ರಮದಿಂದ ಜನುಮದಿನ ಆಚರಿಸಿದರು.

ಕೊಳಗಂಜನಹಳ್ಳಿಯ ದಿ.ಚಿಕ್ಕಬಚ್ಚೇಗೌಡರ ಧರ್ಮಪತ್ನಿಯಾದ ಸೊಣ್ಣಮ್ಮ, ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಅವರ ಮಕ್ಕಳು ಸೇರಿದಂತೆ 6 ತಲೆಮಾರುಗಳ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಜೆಡಿಎಸ್​ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಅವರ ತಾಯಿಯಾಗಿರುವ ಇವರಿಗೆ ಮೂವರು ಪುತ್ರಿಯರು, ಮೂವರು ಪುತ್ರರು. ನಾಲ್ವರು ಮಕ್ಕಳಾದ ಪಾರ್ವತಮ್ಮ, ಪಿಳ್ಳೇಗೌಡ, ಪಿಳ್ಳಮ್ಮ, ರಾಮಚಂದ್ರೇಗೌಡ ವಿಧಿವಶರಾಗಿದ್ದು, ಕೆ.ಬಿ.ಗೋಪಾಲಕೃಷ್ಣ ಮತ್ತು ಅವರ ತಂಗಿ ನಾಗರತ್ನಮ್ಮ ಅವರೊಂದಿಗೆ ಇದ್ದಾರೆ.

ಸೊಣ್ಣಮ್ಮ ಅವರ ಆರು ಮಕ್ಕಳಿಗೆ ಒಟ್ಟು 30 ಮಕ್ಕಳಿದ್ದು, ಮೊಮ್ಮಕ್ಕಳಾಗಿದ್ದಾರೆ. ಈ 30 ಮಂದಿ ಮೊಮ್ಮಕ್ಕಳಿಗೆ 20 ಮಂದಿ ಮಕ್ಕಳಿದ್ದು, ಮರಿಮೊಮ್ಮಕ್ಕಳಾಗಿದ್ದಾರೆ.

ಸೊಣ್ಣಮ್ಮ ಅವರ 20 ಮಂದಿ ಮರಿಮೊಮ್ಮಕ್ಕಳಿಗೆ 18 ಮಂದಿ ಮಕ್ಕಳಿದ್ದಾರೆ. ಹಾಗೆಯೇ ಈ 18 ಮಂದಿಗೆ ಇದೀಗ 7 ಮಂದಿ ಮಕ್ಕಳಿದ್ದು, ಒಟ್ಟಾರೆ ಸೊಣ್ಣಮ್ಮ ಅವರೂ ಸೇರಿದಂತೆ 6 ತಲೆಮಾರಿನ ಕುಟುಂಬದೊಂದಿಗೆ ಆರೋಗ್ಯಕರವಾಗಿ ಯಾರ ಸಹಾಯವಿಲ್ಲದೆ ಓಡಾಡಿಕೊಂಡು ಜೀವನ ನಡೆಸುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net