ಎಕ್ಸಿಟ್​​ ಪೋಲ್​ ಫಲಿತಾಂಶದ ಬಗ್ಗೆ ಸೋನಿಯಾ ಗಾಂಧಿ ಮೊದಲ ಪ್ರತಿಕ್ರಿಯೆ: ಕಾಂಗ್ರೆಸ್​ ನಾಯಕಿ ಹೇಳಿದ್ದೇನು?

Untitled-design-12
Published on

ನವದೆಹಲಿ: ಲೋಕಸಭೆ ಚುನಾವಣೆಯ ಮತದಾನದ ನಂತರ ದೇಶದ ಜನರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದಕ್ಕೂ ಮುನ್ನ ಫಲಿತಾಂಶಗಳ ಬಗ್ಗೆ ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಬಹುದು ಎಂದು ಭವಿಷ್ಯ ನುಡಿದಿವೆ. ಈ ನಡುವೆ ಎಕ್ಸಿಟ್​​ ಪೋಲ್​​ಗಳ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮೊದಲ ಪ್ರತಿಕ್ರಿಯೆ ಬಂದಿದೆ.

"ಲೋಕಸಭೆಯ ಫಲಿತಾಂಶ ಏನಾಗುತ್ತದೆ ಎಂದು ತಿಳಿಯಲು ನಾವು ಕಾಯಬೇಕು, ಕಾದು ನೋಡಬೇಕು" ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಹಾಗೂ ಲೋಕಸಭಾ ಚುನಾವಣೆಯ ನೈಜ ಫಲಿತಾಂಶಗಳು 'ಎಕ್ಸಿಟ್ ಪೋಲ್'ನ ಅಂದಾಜಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಕೆಲವು ಎಕ್ಸಿಟ್ ಪೋಲ್​​ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ 543 ಸ್ಥಾನಗಳ ಪೈಕಿ 346 ಸ್ಥಾನಗಳನ್ನು ನೀಡಲಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ 162 ಸ್ಥಾನಗಳನ್ನು ಮತ್ತು ಇತರ ಪಕ್ಷಗಳು 35 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಶೇಕಡಾವಾರು ಮತಗಳ ಬಗ್ಗೆ ಮಾತನಾಡುವುದಾದರೆ, ಈ ಚುನಾವಣೆಯಲ್ಲಿ ಬಿಜೆಪಿಯ ಮತಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ಎಕ್ಸಿಟ್ ಪೋಲ್‌ನಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಶೇಕಡಾ 47.28 ಮತಗಳನ್ನು ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಶೇಕಡಾ 36.03ರಷ್ಟು ಮತಗಳನ್ನು ಪಡೆಯುತ್ತಿದೆ ಎನ್ನಲಾಗಿದೆ. ಇತರ ಪಕ್ಷಗಳು 16.69 ಶೇಕಡಾ ಮತಗಳನ್ನು ಪಡೆಯುವ ನಿರೀಕ್ಷೆಯಿದೆ.

ಆದರೆ ವಿರೋಧ ಪಕ್ಷದ ನಾಯಕರು ಈ ಸಮೀಕ್ಷೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಜೂನ್ 4 ರಂದು ಫಲಿತಾಂಶ ತಮ್ಮ ಪರವಾಗಿ ಬರಲಿದೆ ಎಂದು ಹೇಳುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net