ಎಕ್ಸಿಟ್​ ಪೋಲ್​ ಅಲ್ಲ.. ಮೋದಿ ಅವರ ಫ್ಯಾಂಟಸಿ ಸಮೀಕ್ಷೆ : ರಾಹುಲ್​ಗಾಂಧಿ

Untitled-design-20
Published on

ನವದೆಹಲಿ : ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲಾ ಎಕ್ಸಿಟ್​ ಪೋಲ್​ಗಳು ಮೋದಿ ಸರ್ಕಾರ ಪುನರಾಗಮನವಾಗಲಿದೆ ಎಂದು ಭವಿಷ್ಯ ನುಡಿದಿವೆ. ಎಲ್ಲಾ ಎಕ್ಸಿಟ್​ ಪೋಲ್​ಗಳು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ದೊಡ್ಡ ಗೆಲುವು ಎಂದು ಹೇಳಿವೆ. ಆದರೆ ಬಿಜೆಪಿಗೆ ಸ್ಪಷ್ಟ ಬಹುಮತದ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ.

"ಇದು ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಮೀಡಿಯಾ ಸಮೀಕ್ಷೆ, ಇದು ಅವರ ಫ್ಯಾಂಟಸಿ ಸಮೀಕ್ಷೆ" ಎಂದು ಹೇಳಿರುವ ರಾಹುಲ್​ ಗಾಂಧಿ, ಬಹುತೇಕ ಸ್ಥಾನಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಫಲಿತಾಂಶ ಬಂದ ಮೇಲೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಎಕ್ಸಿಟ್​ ಪೋಲ್​ ಸಮೀಕ್ಷೆಯನ್ನು ನಕಲಿ ಎಂದು ಬಣ್ಣಿಸಿರುವ ಕಾಂಗ್ರೆಸ್​​, ಇದು ಚುನಾವಣಾ ರಿಗ್ಗಿಂಗ್ ಅನ್ನು ಸಮರ್ಥಿಸುವ ಉದ್ದೇಶಪೂರ್ವಕ ಪ್ರಯತ್ನ ಆಗಿದೆ. ಅಲ್ಲದೆ ಪ್ರತಿಪಕ್ಷಗಳ ಮೈತ್ರಿಕೂಟದ ಕಾರ್ಯಕರ್ತರನ್ನು ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡುತ್ತಿರುವ "ಮಾನಸಿಕ ಆಟ"ಎಂದು ಹೇಳಿದೆ.

ಅವರ ಈ ಆಟ ವಿರೋಧ ಪಕ್ಷಗಳು, ಇಸಿಐ, ಕೌಂಟಿಂಗ್ ಏಜೆಂಟ್‌ಗಳು, ರಿಟರ್ನಿಂಗ್ ಆಫೀಸರ್‌ಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಎಂದು ಹೇಳಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net