ಸೋನಿಯಾಗೆ ಅಧ್ಯಕ್ಷ ಪಟ್ಟ?

sonia gandhi (FILEminimizer)
Published on

ನವದೆಹಲಿ: ಕಾಂಗ್ರೆಸ್​ನ ಮಧ್ಯಂತರ ಅಧ್ಯಕ್ಷೆಯಾಗಿ ಆಗಸ್ಟ್ 10ರಂದು ಒಂದು ವರ್ಷ ಪೂರೈಸಲಿರುವ ಸೋನಿಯಾ ಗಾಂಧಿ ಅವರನ್ನು ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಪಕ್ಷದ ನಾಯಕರು ಚಿಂತನೆ ನಡೆಸುತ್ತಿದ್ದಾರೆ.

ಸದ್ಯವೇ ಸಭೆ ಸೇರಲಿರುವ ಕಾಂಗ್ರೆಸ್ ಕಾರ್ಯ ಸಮಿತಿ (ಸಿ.ಡಬ್ಲ್ಯು.ಸಿ) ಈ ಕುರಿತು ನಿರ್ಧಾರ ಕೈಗೊಳ್ಳುವ ಸಂಭವವಿದೆ. ಪೂರ್ಣಾವಧಿ ಅಧ್ಯಕ್ಷರನ್ನು ಇನ್ನೂ ನೇಮಕ ಮಾಡದಿರುವುದರಿಂದ ಅವಧಿ ವಿಸ್ತರಿಸುವುದು ಪಕ್ಷದ ಸಂವಿಧಾನದ ಅನ್ವಯ ತಾಂತ್ರಿಕ ಅವಶ್ಯಕತೆಯಾಗಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಪಕ್ಷದ ನಿರ್ಧಾರವನ್ನು ಭಾರತೀಯ ಚುನಾವಣೆ ಆಯೋಗಕ್ಕೆ (ಇಸಿಐ) ತಿಳಿಸುವುದು ಕೂಡ ಕಡ್ಡಾಯವಾಗಿದೆ.

ಲೋಕಸಭೆ ಚುನಾವಣೆಯಲ್ಲಿನ ಪರಾಭವದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ 2019 ಆಗಸ್ಟ್ 10ರಂದು ರಾಹುಲ್ ಗಾಂಧಿ ರಾಜಿನಾಮೆ ನೀಡಿದ್ದರಿಂದ ಸೋನಿಯಾರನ್ನು ಹಂಗಾಮಿ ಅಧ್ಯಕ್ಷರಾಗಿ ಸಿಡಬ್ಲ್ಯುಸಿ ನೇಮಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net