ಇನ್ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ; ಆತ್ಮಕತೆಯ 'ಫಸ್ಟ್ ಲುಕ್' ಹಂಚಿಕೊಂಡ ಕಾಂಗ್ರೆಸ್ ನಾಯಕಿ! | Sonia Gandhi Instagram

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇನ್ಸ್ಟಾಗ್ರಾಮ್‌ಗೆ ಪಾದಾರ್ಪಣೆ ಮಾಡಿದ್ದು, ತಮ್ಮ ಬಹುನಿರೀಕ್ಷಿತ ಆತ್ಮಕತೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕದ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ.
Sonia Gandhi Instagram Debut
ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಆತ್ಮಕತೆಯ ಫಸ್ಟ್ ಲುಕ್ ಹಂಚಿಕೊಂಡ ಸೋನಿಯಾ ಗಾಂಧಿ
Published on: 
Summary

ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ

ತಮ್ಮ ಆತ್ಮಕತೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕದ ಫಸ್ಟ್ ಲುಕ್ ಪೋಸ್ಟ್.

ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮ್ಮ ಜೀವನ ಪಯಣದ ಕುರಿತು ಮೊದಲ ಪೋಸ್ಟ್‌ನಲ್ಲಿ ಉಲ್ಲೇಖ.

ಮಗಳು ಪ್ರಿಯಾಂಕಾ ಗಾಂಧಿ ಅವರ ಫೋಟೋಗಳನ್ನೂ ಹಂಚಿಕೊಂಡ ಸೋನಿಯಾ.

Sonia Gandhi Instagram Debut: ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ 79 ವರ್ಷದ ಸೋನಿಯಾ ಗಾಂಧಿ ಅವರು ಪ್ರಸಿದ್ಧ ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್ಸ್ಟಾಗ್ರಾಮ್‌ಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ತಮ್ಮ ಮೊದಲ ಪೋಸ್ಟ್‌ನಲ್ಲೇ ಅವರು ಮುಂಬರುವ ತಮ್ಮ ಬಹುನಿರೀಕ್ಷಿತ ಆತ್ಮಕತೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" (Belonging: A Journey of Love) ಪುಸ್ತಕದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.

ತಮ್ಮ ಸ್ನೇಹಿತೆ ಮಂಜು ದುಬೆ ಅವರ ಸಮ್ಮುಖದಲ್ಲಿ ಈ ವೀಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿರುವ ಅವರು, "ನನ್ನ ಈ ಆತ್ಮಕತೆಯು ಪ್ರೀತಿ, ಕರ್ತವ್ಯ, ಅಗಲಿಕೆ ಮತ್ತು ನನ್ನದೇ ಆದ ಜಾಗದ ಹುಡುಕಾಟದ ಪಯಣವಾಗಿದೆ. ಈ ಪುಸ್ತಕವನ್ನು ಓದುಗರೊಂದಿಗೆ ಹಂಚಿಕೊಳ್ಳಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಇದರ ಜತೆಗೆ ತಮ್ಮ ಪುತ್ರಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರ ಫೋಟೋಗಳನ್ನೂ ಸಹ ಅವರು ಶೇರ್ ಮಾಡಿದ್ದಾರೆ. ಇಂದಿನ ಯುವಜನತೆ ಹಾಗೂ ‘ಜೆನ್​ ಜಿ’ (Gen Z) ಪೀಳಿಗೆ ಹೆಚ್ಚಾಗಿ ಬಳಸುವ ಇನ್ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಅವರ ಎಂಟ್ರಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ 4,000 ಭಾರತೀಯ ಉಮ್ರಾ ಯಾತ್ರಿಕರು ಪರದಾಟ; ಕೇಂದ್ರಕ್ಕೆ ಓವೈಸಿ ಮನವಿ | Owaisi on Umrah Pilgrims

ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಹಲವು ದಗ್ಗಜ ರಾಜಕಾರಣಿಗಳು ಈಗಾಗಲೇ ಇನ್ಸ್ಟಾಗ್ರಾಮ್ ಮೂಲಕ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಇದನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಸೋನಿಯಾ ಗಾಂಧಿ ಕೂಡ ಅವರ ಸಾಲಿಗೆ ಸೇರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net