

Monsoon Session: ಮುಂಬರುವ ಮಳೆಗಾಲದ ಅಧಿವೇಶನ( Monsoon Session of Parliament)ದಲ್ಲಿ ಆಡಳಿತ ಪಕ್ಷ(ಕೇಂದ್ರ ಸರ್ಕಾರ) ಹೇಗೆ ಕಟ್ಟಿ ಹಾಕಬೇಕು ಎಂದು ಚರ್ಚಿಸಲು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಮಂಗಳವಾರ (ಜು.14) ರಂದು ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಸಂಸ್ಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಮುಗಿ ಬೀಳಲು ಕೈ ಪಡೆ ಸಿದ್ಧವಾಗಿದ್ದು, ದೇಶದಲ್ಲಿ ಆಗುತ್ತಿರುವ ಹಲವಾರು ರೀತಿಯ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಲು ರಣತಂತ್ರ ರೂಪಿಸುತ್ತಿವೆ. ಪ್ರಮುಖವಾಗಿ ದೇಶದಲ್ಲಿ ನಡೆದಿರುವ ಪೆಹಲ್ಗಾಮ್ ಭಯೋತ್ಪಾದ ದಾಳಿ ಹಾಗೂ ಆಪರೇಷನ್ ಸಿಂಧೂರ(Operation Sindoor), ಬಿಹಾರ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (Election Commission’s Special Intensive Revision) SIR) ಬಗ್ಗೆ ಚರ್ಚಿಸಲು ನಿರ್ಧಾರ ಮಾಡುವ ಸಾಧ್ಯತೆ ಇದೆ. ಸಭೆಯಲ್ಲಿ ಕಾಂಗ್ರೆಸ್ನ ಲೋಕಸಭೆ ಹಾಗೂ ರಾಜ್ಯಸಭೆಯ ಪ್ರಮುಖ ನಾಯಕರು ಬರುವ ಸಾಧ್ಯತೆ ಇದೆ ಹೇಳಲಾಗಿದೆ.
ಸಂಸತ್ ಅಧಿವೇಶನದಲ್ಲಿ ಅಡಳಿತ ಪಕ್ಷದ ವಿರುದ್ಧ ಪ್ರಶ್ನೆಗಳ ಮಳೆ ಸುರಿಸಲು ಕೈ ಸಿದ್ಧವಾಗಿದೆ. ಪ್ರಮುಖವಾಗಿ ಆಪರೇಷನ್ ಸಿಂಧೂರ ದಾಳಿಯ ಸಾಕ್ಷ್ಯಗಳು ಹಾಗೂ ವಿಫಲತೆಗಳ ಬಗ್ಗೆ ಕೇಂದ್ರವನ್ನು ಪ್ರಶ್ನೆಸುವ ಬಗ್ಗೆ ಹಾಗೂ ಬಿಹಾರ ಎಸ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಈಗಾಗಲೇ ಹೇಳಿದ್ದು, ಇದು "ಅಸಂವಿಧಾನಿಕ" ಮತ್ತು ಮತದಾರರನ್ನು ವಂಚಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರದ ವಿರುದ್ಧ ಆರೋಪಿಸಿದೆ.
ಆಪರೇಷನ್ ಸಿಂಧೂರ ದಾಳಿಯ ನಂತರ ನಡೆದ ಕದನವಿರಾಮ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೇಳಿಕೆಗಳ ಕುರಿತು ಪ್ರಶ್ನಿಸಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ. ಅಮೆರಿಕದ ಅತಿಯಾದ ಸುಂಕ ಹೇರಿಕೆ, ರಾಜ್ಯ್ಳಗಳ ಅರ್ಥಿಕತೆ, ಬೆಲೆ ಏರಿಕೆ, ನಿರುದ್ಯೋಗ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಕೈ ಮುಂದಾಗಲಿದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)