

14 ವರ್ಷಗಳ ಹಿಂದೆ ತನ್ನ ತಂದೆಯ ಹತ್ಯೆಗೆ ಪ್ರತೀಕಾರವಾಗಿ 45 ವರ್ಷದ ವ್ಯಕ್ತಿಯೊಬ್ಬನನ್ನು ಯುವಕನೊಬ್ಬ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದ ಮಂಗಳೋರಾ ಗ್ರಾಮದಲ್ಲಿ ನಡೆದಿದೆ.
ಜೈವೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೇ ಗುಂಡೇಟಿಗೆ ಬಲಿಯಾಗಿದ್ದು, ಶನಿವಾರ ಸಂಜೆ ತನ್ನ ಹೊಲದಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಆರೋಪಿ ರಾಹುಲ್ (30) ಆತನ ಮೇಲೆ ಗುಂಡು ಹಾರಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಮಧ್ಯೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೃತನ ಕುಟುಂಬ ನೀಡಿದ ದೂರಿನ ಪ್ರಕಾರ, ಜೈವೀರ್ ಹತ್ಯೆ ಹಳೆಯ ದ್ವೇಷದ್ದಾಗಿದೆ. ರಾಹುಲ್ ತಂದೆ ಬ್ರಿಜ್ಪಾಲ್ ಅವರನ್ನು 2011ರಲ್ಲಿ ಜೈವೀರ್ ಕೊಲೆ ಮಾಡಿದ್ದನು. ಇದಕ್ಕಾಗಿ ಅವನು 11 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದನು. ಜೈಲಿನಿಂದ ಬಿಡುಗಡೆಯಾದ ನಂತರ ಜೈವೀರ್ ಕಳೆದ ಮೂರು ವರ್ಷಗಳಿಂದ ಗ್ರಾಮದಲ್ಲಿ ವಾಸಿಸುತ್ತಿದ್ದನು.(ಏಜೆನ್ಸೀಸ್)