ಮನೆಗೆ ಬೆಂಕಿ ಹಚ್ಚಿದ ಮಗ; ಸುಟ್ಟು ಕರಕಲಾದ ದಂಪತಿ: ಆರೋಪಿ ಬಂಧನ | Burnt Death

dk-98-679df4934fda4
Published on

ಕೇರಳ: ಆಸ್ತಿ ವಿಚಾರವಾಗಿ ತಂದೆ- ತಾಯಿ ಇದ್ದ ಮನೆಗೆ ಬೆಂಕಿ ಹಚ್ಚುವ ಮೂಲಕ ವೃದ್ಧ ದಂಪತಿಯನ್ನು ಕೊಂದಿರುವ(Burnt Death) ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಚೆನ್ನಿತಲ ಗ್ರಾಮದಲ್ಲಿ ಶನಿವಾರ ನಡೆದಿದೆ.

ಚೆನ್ನಿತಲ ಗ್ರಾಮದ ನಿವಾಸಿಗಳಾದ ರಾಘವನ್​(96) ಪತ್ನಿ ಭಾರತಿ(86) ಮೃತರು. ಮೃತರ ಪುತ್ರ ವಿಜಯ್​ ಆರೋಪಿ ಎಂದು ಪೊಲೀಸರು ಗುರುತಿಸಿದ್ದು, ತನಿಖೆ ಬಳಿಕ ಕೃತ್ಯದ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಆಸ್ತಿ ವಿಚಾರವಾಗಿ ತಂದೆ-ತಾಯಿ ಜತೆ ಜಗಳವಾಡಿದ ಮಾಹಿತಿ ಇದ್ದು, ಇದೇ ವಿಚಾರವನ್ನು ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಬೆಳಗ್ಗೆ 3.30ರ ಸುಮಾರಿಗೆ ಘಟನೆ ನಡೆದಿದ್ದು, ಮನೆಗೆ ಬೆಂಕಿ ಬಿದ್ದಿರುವುದನ್ನು ಆಟೋಚಾಲಕ ಗಮನಿಸಿದ್ದಾನೆ. ಗ್ರಾಮಸ್ಥರಿಗೆ ತಿಳಿದ ಬಳಿಕ ಪೊಲೀಸ್​ ಮತ್ತು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಂತರ ಮನೆಗೆ ಬಿದ್ದ ಬೆಂಕಿ ನಂದಿಸಿ ಸುಟ್ಟು ಕರಕಲಾದ ದೇಹಗಳನ್ನು ಹೊರ ತೆಗೆದಿದ್ದಾರೆ. ವಿಜಯ್ ಮೇಲೆ ಕೃತ್ಯದ ಶಂಕೆ ವ್ಯಕ್ತಪಡಿಸಿದ್ದು, ಇದೀಗ ಬಂಧಿಸಲಾಗಿದೆ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net