ಅಮ್ಮನನ್ನು ಕೊಂದು ಸಾವಿರ ಪೀಸ್​ ಮಾಡಿದ ಮಗ! ಹೆತ್ತವಳ ಮಾಂಸವನ್ನೇ ಫ್ರಿಡ್ಜ್​ನಲ್ಲಿಟ್ಟು ತಿನ್ನುತ್ತಿದ್ದ!

mother
Published on

ಮಾಡ್ರಿಡ್: ತಾಯಿ ಮತ್ತು ಮಗನ ಸಂಬಂಧ ಅತ್ಯಂತ ಪವಿತ್ರ ಸಂಬಂಧ ಎನ್ನುತ್ತಾರೆ. ಆದರೆ ಮಗನೊಬ್ಬ ತನ್ನ ತಾಯಿಯನ್ನೇ ಕೊಂದು, ಆಕೆಯ ಶವವನ್ನು ಸಾವಿರ ತುಂಡುಗಳಾಗಿ ಕತ್ತರಿಸಿ, ವಾರಗಟ್ಟಲೆ ಆಕೆಯ ಮಾಂಸವನ್ನೇ ತಿಂದಿರುವ ಘಟನೆ ಸ್ಪೇನ್​ನಲ್ಲಿ ನಡೆದಿದೆ. ಅಪರಾಧಿಗೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸ್ಪೇನ್​ನ ವೆಂಟಾಸ್​ನಲ್ಲಿದ್ದ ಅಲ್ಬರ್ಟೋ ತಾಯಿಯನ್ನೇ ಕೊಂದಿರುವ ಅಪರಾಧಿ. 2019ರಲ್ಲಿ ಆತ ತಾಯಿಯನ್ನು ಕೊಲೆ ಮಾಡಿದ್ದಾನೆ. ಅದಾದ ನಂತರ ಆಕೆಯ ದೇಹವನ್ನು ಗರಗಸದಿಂದ ಕೊಯ್ದಿದ್ದಾನೆ. ತಲೆ, ಕೈಗಳು ಮತ್ತು ಹೃದಯವನ್ನು ಕತ್ತರಿಸಿ ಮಂಚದ ಮೇಲೆ ಇಟ್ಟಿದ್ದಾನೆ. ಬೇರೆಲ್ಲ ಭಾಗವನ್ನು ಬಿಡಿ ಬಿಡಿಯಾಗಿ ಕತ್ತರಿಸಿ ಸಾವಿರಕ್ಕೂ ಅಧಿಕ ಪೀಸ್​ಗಳನ್ನು ಮಾಡಿದ್ದಾನೆ. ಅದನ್ನು ಪ್ಲಾಸ್ಟಿಕ್​ ಬಾಕ್ಸ್​ ಒಂದರಲ್ಲಿ ತುಂಬಿಸಿಟ್ಟು, ಫ್ರಿಡ್ಜ್​ ಒಳಗಿಟ್ಟಿದ್ದಾನೆ.

ಫ್ರಿಡ್ಜ್​ನಲ್ಲಿ ವಾರಗಟ್ಟಲೆ ಮಾಂಸ ಇಟ್ಟುಕೊಂಡಿದ್ದ ಅಲ್ಬರ್ಟೋ ವಾರಪೂರ್ತಿ ಅದನ್ನು ತೆಗೆದು ಅದರಿಂದಲೇ ಅಡುಗೆ ಮಾಡಿಕೊಂಡು ತಿಂದಿದ್ದಾನಂತೆ. ಆತನ ತಾಯಿಯ ಸ್ನೇಹಿತೆಯೊಬ್ಬರು ನೀಡಿದ ದೂರನ್ನು ಆಧರಿಸಿ ಮನೆಗೆ ಹೋದ ಪೊಲೀಸರಿಗೆ ತೀರಾ ವಿಚಿತ್ರ ಮನುಷ್ಯ ಸಿಕ್ಕಿಬಿದ್ದಿದ್ದಾನೆ. ತಾಯಿಯ ದೇಹದ ಭಾಗಗಳನ್ನು ಮತ್ತು ಮಾಂಸಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ಆತನ ಪರ ವಕೀಲರು ಆತನನ್ನು ಮಾನಸಿಕ ಅಸ್ವಸ್ಥ ಎಂದು ಸಾಬೀತು ಪಡಿಸಲು ಒದ್ದಾಡಿದ್ದು ಅದು ಸಾಧ್ಯವಾಗಿಲ್ಲ. ಅಪರಾಧಿಗೆ 15 ವರ್ಷ 5 ತಿಂಗಳುಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net