ಮಗನಿಗೆ ಬೆಳಗಿನ ತಿಂಡಿ ಕೊಡದ ತಾಯಿ! ಮುಂದೆ ನಡೆದಿದ್ದು ಮಾತ್ರ ದುರಂತ

ವಿಜಯವಾಣಿ - 2024-02-03T145532.128
Published on

ಮುಳಬಾಗಲು: ದಿನನಿತ್ಯ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕನೊಬ್ಬ ತನ್ನ ತಾಯಿ ಬೆಳಗಿನ ತಿಂಡಿ ಕೊಡಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಆಕೆಯ ತಲೆಗೆ ಕಬ್ಬಿಣದ ರಾಡಿನಿಂದ ಹತ್ಯೆಗೈದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿ ವರದಿಯಾಗಿದೆ.

ಎಂದಿನಂತೆ ಶಾಲೆಗೆ ಹೋಗಲು ಸಿದ್ಧನಾಗಿದ್ದ ಬಾಲಕ ತಾಯಿಯನ್ನು ತಿಂಡಿ ಕೇಳಿದ್ದಾನೆ. ಆದ್ರೆ, ತಿಂಡಿ ಆಗಿಲ್ಲ ಎಂಬ ಸುದ್ದಿ ಕೇಳಿ ಕುಪಿತಗೊಂಡು, ತಾಯಿಯ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದಿದ್ದಾನೆ. ಘಟನೆ ಸಂಭವಿಸಿದ ಬೆನ್ನಲ್ಲೇ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿದ ಆತ, ಸ್ಟೇಷನ್​ನ ಹಿರಿಯ ಪೊಲೀಸ್​ ಅಧಿಕಾರಿ ಬಳಿ ತಾನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.

ಬಾಲಕನ ಹೇಳಿಕೆಯ ಪ್ರಕಾರ, ಶಾಲೆಗೆ ಹೋಗುವ ಮುನ್ನ ನನ್ನ ತಾಯಿಗೆ ತಿಂಡಿ ಕೊಡಲು ಕೇಳಿದೆ. ಆದರೆ ಅವರು ಇನ್ನು ಆಗಿಲ್ಲ ಎಂದು ಹೇಳಿದರು. ಜತೆಗೆ ನೀನು ತನ್ನ ಮಗನಲ್ಲ ಎಂದು ದೂಷಿಸಿದರು. ಇದಕ್ಕೆ ಕೋಪಗೊಂಡು ಕಬ್ಬಿಣದ ರಾಡ್‌ನಿಂದ ತಾಯಿಯ ತಲೆಗೆ ಹೊಡೆದೆ ಎಂದು ತಿಳಿಸಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net