ಅಪ್ಪ-ಅಮ್ಮನ ಜಗಳಕ್ಕೆ ಒಂದು ವರ್ಷದ ಮಗ ಬಲಿ; ತಾಯಿಯಿಂದಲೇ ಕೊಲೆ..

Pub crime
Published on

ಉತ್ತರಪ್ರದೇಶ: ಅಪ್ಪ-ಅಮ್ಮನ ಜಗಳಕ್ಕೆ ಒಂದು ವರ್ಷದ ಮಗನೇ ಬಲಿಯಾಗಿದ್ದು, ತಾಯಿಯಿಂದಲೇ ಈ ಕೊಲೆ ನಡೆದಿದೆ. ಉತ್ತರಪ್ರದೇಶದಲ್ಲಿ ಇಂಥದ್ದೊಂದು ದಯನೀಯ ಪ್ರಕರಣ ನಡೆದಿದೆ.

ಉತ್ತರಪ್ರದೇಶದ ಸುಲ್ತಾನಪುರದ ಫರ್ಮಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಇಲ್ಲಿನ ರೋಹಿತ್-ಖುಷ್ಬೂ ಜಗಳ ಮಾಡಿಕೊಂಡ ದಂಪತಿ. ಮುಂಬೈನಲ್ಲಿ ಮಗನೊಂದಿಗೆ ವಾಸವಿದ್ದ ಪತಿ ರೋಹಿತ್ ಊರಿಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಭಾನುವಾರ ಮರಳಿ ಮುಂಬೈಗೆ ಹೋಗುವ ವಿಚಾರವಾಗಿ ಈ ದಂಪತಿ ಮಧ್ಯೆ ಜಗಳವಾಗಿತ್ತು.

ಮುಂದಿನ ತಿಂಗಳಲ್ಲಿ ಸಹೋದರನೊಂದಿಗೆ ಮುಂಬೈಗೆ ಬರುವಂತೆ ಪತ್ನಿಗೆ ಹೇಳಿದ್ದೆ. ಆದರೆ ಅದಕ್ಕೆ ಒಪ್ಪದ ಆಕೆ ಜಗಳವಾಡಿ ಬಳಿಕ ಮಗನ ಕತ್ತು ಹಿಸುಕಿದ್ದಳು. ನಾನು ಆಗ ತಪ್ಪಿಸಿದ್ದೆ. ನಂತರ ರಾತ್ರಿ ಆಕೆ ಮಗನನ್ನು ಜೊತೆಗೆ ಮಲಗಿಸಿಕೊಂಡಿದ್ದು, ಬಳಿಕ ಆತನನ್ನು ಸಾಯಿಸಿದ್ದಳು ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾನೆ.

ಮಗು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪತಿಯ ದೂರಿನ ಮೇರೆಗೆ ಪೊಲೀಸರು ಪತ್ನಿಯ ವಿರುದ್ಧ ಪ್ರಕರಣ ದಾಖಲಿಕೊಂಡಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net