ನೀನ್ಯಾಕೆ ನನ್ನ ಮದುವೆ ಮಾಡಿಲ್ಲ? ಎಂದು ಹೆತ್ತ ತಾಯಿಯನ್ನೇ ಕೊಲೆಗೈದ ಮಗ

son killed his mother in Kalaburagi
Published on

ಕಲಬುರಗಿ: ಮದುವೆ ಮಾಡಿಲ್ಲ ಎಂದು ತಾಯಿಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋಚಾವರಂನಲ್ಲಿ ನಡೆದಿದೆ.

ಶೋಭಾ (45)ಮೃತ ಮಹಿಳೆ. ಅನಿಲ್ ಕೊಲೆ ಆರೋಪಿ. ಇಷ್ಟು ದಿನ ಆದರೂ ನನ್ನ ಮದುವೆ ಮಾಡಿಲ್ಲ ಎನ್ನುವ ಕೋಪಕ್ಕೆ ಮಗ ತಾಯಿಯನ್ನು ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

 ನಡೆದಿದ್ದೇನು?: ಅನಿಲ್ ಕುಡಿದು ಮನೆಗೆ ಬಂದಿದ್ದಾನೆ.  ಕುಡಿದ ನಶೆಯಲ್ಲಿ ಮದುವೆ ಬಗ್ಗೆ ಮಾತನಾಡಿ ತಾಯಿಯೊಂದಿಗೆ ಜಗಳವಾಡಿದ್ದಾನೆ. ಇನ್ನಷ್ಟು ಕೋಪಗೊಂಡ ಅನಿಲ್ ತನಗೆ ಏಕೆ ಮದುವೆ ಮಾಡಿಸಿಲ್ಲ ಎಂದು ತಾಯಿಗೆ ಪ್ರಶ್ನೆ ಮಾಡಿದ್ದಾನೆ. ಬಳಿಕ ಕುಡಿದ ನಶೆಯಲ್ಲಿ ಅಲ್ಲೇ ಇದ್ದ ಕಟ್ಟಿಗೆಯಿಂದ ಹೊಡೆದಿದ್ದಾನೆ. ತೀವ್ರ ರಸ್ತ ಸ್ರಾವದಿಂದ ಮಹಿಳೆ ಮೂರ್ಚೆ ತಪ್ಪಿ ಬಿದ್ದು ಮಹಿಳೆ ಅಲ್ಲೆ ಪ್ರಾಣ ಬಿಟ್ಟಿದ್ದಾಳೆ.

 ಚಿಂಚೋಳಿಯ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅನಿಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತಾಗಿ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net