ನಾವು ಹೇಳಿದ್ದೇ ತಪ್ಪಾ? ಅಪ್ಪ-ಅಮ್ಮನ ಮಾತಿಗೆ ನೊಂದ 10ನೇ ಕ್ಲಾಸ್ ವಿದ್ಯಾರ್ಥಿ ಕಂಡಿದ್ದು ದುರಂತ ಅಂತ್ಯ! | No More

ವಿಜಯವಾಣಿ - 2024-11-24T202137.447
Published on

ಹೈದರಾಬಾದ್​: ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಬದುಕಿನ ಪೂರ ತ್ಯಾಗಗಳನ್ನು ಮಾಡಿಕೊಂಡೇ ಜೀವನ ಸಾಗಿಸುವ ಹೆತ್ತವರು, ತಮ್ಮ ಸುಖ, ಖುಷಿಗಿಂತ ಮಿಗಿಲಾಗಿ ಮಕ್ಕಳ ಸಂತೋಷಕ್ಕಾಗಿ ಪ್ರತಿಕ್ಷಣ ಜೀವಿಸುತ್ತಾರೆ. ತಮಗೆ ಒಂದೇ ಒಂದು ಜತೆ ಬಟ್ಟೆ ತೆಗೆದುಕೊಳ್ಳಲು ಬಯಸದ ಪೋಷಕರು ಅವರಿಗಾಗಿ ಎಲ್ಲವನ್ನೂ ಮಾಡಲು ಮುಂದಾಗುತ್ತಾರೆ. ಕಣ್ಣಿಗೆ ಕಾಣುವ ದೇವರು ಅಪ್ಪ-ಅಮ್ಮ ಎಂದು ಪೂಜಿಸಿ, ಆರಾಧಿಸಬೇಕಾದ ಮಕ್ಕಳೇ ಅವರ ಶತ್ರುಗಳಂತೆ ವರ್ತಿಸಿ, ತಿರುಗಿಬಿದ್ದರೆ ನಿಜಕ್ಕೂ ತಂದೆ-ತಾಯಿ ಮನಸ್ಸಿಗೆ ತೀರ ಘಾಸಿಯಾಗುತ್ತದೆ. ಅದರಲ್ಲೂ ಮಕ್ಕಳೇ ತಮ್ಮ ಆಸ್ತಿ, ಜೀವನ ಎಂದು ನೂರಾರು ಕನಸು ಕಾಣುವ ಪೋಷಕರಿಗೆ ಅವರ ಸಾವಿನ ಸುದ್ದಿ (No More) ತಿಳಿದರೆ, ಪ್ರಪಂಚವೇ ಕುಸಿದು ಬಿದ್ದಂತಾಗುತ್ತದೆ. ಸದ್ಯ ಈ ಘಟನೆ ಕೂಡ ಅದನ್ನೇ ಹೇಳುತ್ತದೆ.

ಛೀಮಾರಿ ಹಾಕಿ, ಬುದ್ಧಿ ಮಾತು

ಸಿರಿಸಿಲ್ಲ ಜಿಲ್ಲೆಯ ಕೋನರಪೇಟೆ ಮಂಡಲದ ಸುದ್ದಲ ಗ್ರಾಮದ ಆಲುವಾಲ ವೆಂಕಟೇಶ್ (16) ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮಗ ಸಿಗರೇಟ್​ ಸೇದುವ ಚಟಕ್ಕೆ ಸಿಲುಕಿದ್ದನ್ನು ಅರಿತ ತಂದೆ, ಇದೆಲ್ಲವೂ ತಪ್ಪು. ಇದು ನಿನ್ನ ಆರೋಗ್ಯ ಕೆಡಿಸುತ್ತದೆಯೇ ವಿನಃ ಚೆನ್ನಾಗಿ ಇಡುವುದಿಲ್ಲ. ಮುಂದೇನಾದರೂ ನೀನು ಸೇದುವುದು ಕಂಡರೆ ನಾನು ಸುಮ್ಮನಿರಲ್ಲ ಎಂದು ವಿದ್ಯಾರ್ಥಿಯ ಅಪ್ಪ ಛೀಮಾರಿ ಹಾಕಿ, ಬುದ್ಧಿ ಹೇಳಿದ್ದರು.

ಇದರಿಂದ ಮನನೊಂದ ಬಾಲಕ, ವಿಷ ಕುಡಿದು ಸಾಯಲು ಯತ್ನಿಸಿದ್ದ. ಮಗನ ಆತ್ಮಹತ್ಯೆ ನಿರ್ಧಾರ ತಿಳಿದ ಪೋಷಕರು, ಹೇಗೋ ಆತನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದರು. ಅಪ್ಪ ಆಡಿದ ಕಟು ಮಾತುಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಬಾಲಕ, ಶಾಲೆಯಲ್ಲಿ ಸ್ನೇಹಿತರು, ಕುಟುಂಬದವರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದೇ ವಿಷಯಕ್ಕೆ ಬೇಸರಗೊಂಡಿದ್ದ ಆತ ಸಾಯುವ ನಿರ್ಧಾರದಿಂದ ಹಿಂದೆ ಸರಿಯದೆ, ಕಡೆಗೂ ಸಾವಿಗೆ ಶರಣಾಗಿದ್ದಾನೆ.

ಯಾರೂ ಇಲ್ಲದ ಸಮಯ

ವಿದ್ಯಾರ್ಥಿ, 6 ತಿಂಗಳ ಹಿಂದೆ ಅಪ್ಪ ವೆಂಕಟೇಶ್ ಬೈದಿದ್ದ ವಿಷಯದಿಂದ ಮನಸ್ಸಿನಲ್ಲಿ ಕೊರಗಾಡುತ್ತಿದ್ದ. ನಿನ್ನೆ (ನ.23) ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಗಮನಿಸಿ, ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುತ್ರನ ಮೇಲಿದ್ದ ಪ್ರೀತಿಯಿಂದ ಆತ ಕೆಟ್ಟ ಚಟಕ್ಕೆ ತುತ್ತಾಗಬಾರದು ಎಂದು ಬೈದಿದ್ದೇ ಇಂದು ಪೋಷಕರ ಕಣ್ಣೀರಿಗೆ ಕಾರಣವಾಗಿದೆ. ಬಾಲಕನ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net