ಅಳಿಯ, ಮಗಳ ಜಗಳದಲ್ಲಿ ಅತ್ತೆ ಪ್ರಾಣ ಹೋಯ್ತು

deadbody
Published on

ತುಮಕೂರು : ಮನೆಗೆ ಬಂದ ಅತ್ತೆಯನ್ನೇ ಅಳಿಯ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಅಶ್ವಿತ್ ಉನ್ನಿಸಾ (58) ಕೊಲೆಯಾದ ಮಹಿಳೆ. ಸೈಯದ್ ಸುಹೇಲ್ ಕೊಲೆಗೈದ ಆರೋಪಿಯಾಗಿದ್ದಾನೆ. ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಸೈಯದ್ ಸುಹೇಲ್ ಮತ್ತು ಪತ್ನಿಯ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಪತಿ ಗಲಾಟೆ ಮಾಡುತ್ತಿದ್ದಾನೆ ಎಂದು ತುಮಕೂರು ತನ್ನ ತಾಯಿ ಅಶ್ವಿತ್ ಉನ್ನಿಸಾಗೆ ಮಗಳು ಫೋನ್ ಮಾಡಿದ್ದಳು. ಕಲಹ ನಿವಾರಿಸಲು ಅಳಿಯನ ಮನೆಗೆ ಅಶ್ವಿತ್ ಉನ್ನಿಸಾ ಹೋಗಿದ್ದಾರೆ. ಅಳಿಯ ಸೈಯದ್ ಸುಹೇಲ್ ಅತ್ತೆ ಮೇಲೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಅಶ್ವಿತ್ ಉನ್ನಿಸಾ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉನ್ನಿಸಾ ಮೃತಪಟ್ಟಿದ್ದಾರೆ. ಅಳಿಯ, ಮಗಳ ಜಗಳವನ್ನು ಬಿಡಿಸಲು ಹೋಗಿ ಅತ್ತೆ ಪ್ರಾಣ ಕಳೆದುಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net