ಭಾರತೀಯರು ಹೆಮ್ಮೆ ಪಡುವ ಸಂಗತಿ

ತಿ.ನರಸೀಪುರ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತಾಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಉದ್ಘಾಟಿಸಿದರು. ಟಿ.ಜೆ.ಸುರೇಶಾಚಾರ್, ವಸಂತಾ ಶ್ರೀಕಂಠ, ಪಿ.ಎಸ್.ಅನಂತರಾಜು, ಕರೋಹಟ್ಟಿ ಮಹದೇವಯ್ಯ, ಎಸ್.ಎನ್. ಸಿದ್ದಾರ್ಥ, ಮಹದೇವಸ್ವಾಮಿ, ಕುಕ್ಕೂರು ಗಣೇಶ್ ಇತರರಿದ್ದರು.
ತಿ.ನರಸೀಪುರ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತಾಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಉದ್ಘಾಟಿಸಿದರು. ಟಿ.ಜೆ.ಸುರೇಶಾಚಾರ್, ವಸಂತಾ ಶ್ರೀಕಂಠ, ಪಿ.ಎಸ್.ಅನಂತರಾಜು, ಕರೋಹಟ್ಟಿ ಮಹದೇವಯ್ಯ, ಎಸ್.ಎನ್. ಸಿದ್ದಾರ್ಥ, ಮಹದೇವಸ್ವಾಮಿ, ಕುಕ್ಕೂರು ಗಣೇಶ್ ಇತರರಿದ್ದರು.
Published on

ತಿ.ನರಸೀಪುರ: ಸಾಮಾಜಿಕ ವ್ಯವಸ್ಥೆ ಅರಿತು ದೇಶದ ಆಡಳಿತದಲ್ಲಿ ಸುಧಾರಣೆ ತರಲು ಶ್ರಮಿಸಿದ ಡಾ.ಅಂಬೇಡ್ಕರ್ ಮಹಾನ್ ಜಾಗತಿಕ ನಾಯಕ ಎಂದು ತಾಪಂ ಆಡಳಿತಾಧಿಕಾರಿ ಕೆ.ಬಿ.ಪ್ರಭುಸ್ವಾಮಿ ಬಣ್ಣಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಜಯಂತಿ ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಆಚರಿಸುತ್ತಿರುವುದು ಭಾರತೀಯರಾದ ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದರು.

ಮುಖ್ಯ ಭಾಷಣಕಾರ ವಕೀಲ ಬಿ.ಆರ್.ರಂಗಸ್ವಾಮಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಂಬೇಡ್ಕರ್ ವಿಶ್ವಜ್ಞಾನದ ಸಂಕೇತವಾಗಿದ್ದಾರೆ. ಸಮಾಜದಲ್ಲಿ ಸಮಾನತೆ ಎಲ್ಲರಿಗೂ ಸಿಗಬೇಕು. ಮಹಿಳೆಯು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಶೋಷಿತರು, ದಲಿತ ಸಮುದಾಯಗಳು ನನ್ನಂತೆ ವಿದ್ಯಾವಂತರಾಗಬೇಕು ಎಂದು ಕನಸು ಕಂಡಿದ್ದರು. ಭಾರತವನ್ನು ಬಲಿಷ್ಠ, ಪ್ರಬುದ್ಧ ರಾಷ್ಟ್ರವನ್ನಾಗಿ ನಿರ್ಮಿಸಬೇಕು ಎಂಬ ಹಂಬಲ, ತುಡಿತ ಅವರಲ್ಲಿತ್ತು ಎಂದರು.

ಡಾ.ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ಸಮುದಾಯವೊಂದಕ್ಕೆ ನಾಯಕರೆಂದು ಬಿಂಬಿಸಲಾಗಿರುವ ಡಾ.ಅಂಬೇಡ್ಕರ್ ಅವರನ್ನ ಸಂವಿಧಾನ ಮತ್ತು ಮೀಸಲಾತಿಗಷ್ಟೇ ಸೀಮಿತಗೊಳಿಸಿರುವ ಭಾರತೀಯರ ಚಿಂತನೆ ಬದಲಾಗಬೇಕು. ಭಾರತವನ್ನು ಸ್ವತಂತ್ರಗೊಳಿಸಬೇಕು. ಸಮಾನತೆಯ ಅವಕಾಶವನ್ನ ಎಲ್ಲ ವರ್ಗದ ಜನರಿಗೂ ಕಲ್ಪಿಸಬೇಕೆಂದು ಹೋರಾಟವನ್ನು ಮಾಡುತ್ತಿದ್ದ ಅಂಬೇಡ್ಕರ್ ಅವರು ಕೂಡ ಸ್ವತಂತ್ರ ಹೋರಾಟಗಾರರೇ ಆಗಿದ್ದಾರೆ ಎಂಬುದನ್ನು ಮನಗಾಣಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಭೂ ನ್ಯಾಯ ಮಂಡಳಿ ಸದಸ್ಯ ಕುಕ್ಕೂರು ಗಣೇಶ್, ಪುರಸಭೆ ಅಧ್ಯಕ್ಷೆ ವಸಂತಾ ಶ್ರೀಕಂಠ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಎನ್.ಸೋಮು, ಸದಸ್ಯ ಮಂಜು ಬಾದಾಮಿ, ಜಿಪಂ ಮಾಜಿ ಸದಸ್ಯ ಹೊನ್ನ ನಾಯಕ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ, ಮಾಜಿ ಸದಸ್ಯರಾದ ರಾಮಲಿಂಗಯ್ಯ, ಬಸವರಾಜು, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು, ದಲಿತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ತುಂಬ ಮಂಜುನಾಥ್, ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಬಾಬೂಜಿ ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ, ಮಾಜಿ ಅಧ್ಯಕ್ಷರಾದ ಡಿ.ಶಂಕರ್, ಮೂಗೂರು ಸಿದ್ದರಾಜು, ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಬಿ.ಮನ್ಸೂರ್ ಆಲಿ, ದಸಂಸ ಸಂಚಾಲಕರಾದ ಸೋಸಲೆ ಶಶಿಕಾಂತ್, ಎ.ಶಿವಕುಮಾರ್, ಎಸ್.ನಂಜುಂಡಯ್ಯ, ರಾಜಶೇಖರಮೂರ್ತಿ, ಗಣೇಶಸ್ವಾಮಿ, ಬೆನಕನಹಳ್ಳಿ ಗಂಗಾಧರ, ಕಿಸಾನ್ ಸಂಘದ ಅಧ್ಯಕ್ಷ ಶಿವಕುಮಾರ್, ರಾಜು, ಮರಿಸ್ವಾಮಿ, ರಜನಿ, ತ್ರಿವೇಣಿ ನಗರ ಮಹದೇವಮ್ಮ, ಬಿಇಒ ಶಿವಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗು, ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ, ಆರ್. ಹೇಮಂತ್ ರಾಜು, ಇನ್ಸ್‌ಪೆಕ್ಟರ್ ಧನಂಜಯ, ಎಇಇಗಳಾದ ವೀರೇಶ್, ಸತೀಶ್ ಚಂದ್ರನ್, ಶಿವರಾಜು, ಟಿಎಚ್‌ಒ ಡಾ.ರವಿಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ರಾಜಣ್ಣ, ಸಿಡಿಪಿಒ ಗೋವಿಂದರಾಜು, ಸಹಾಯಕ ನಿರ್ದೇಶಕರಾದ ಎಂ.ರಾಜಣ್ಣ, ಲಿಂಗರಾಜು, ಶ್ವೇತಾ, ಸುಹಾಸಿನಿ, ತಾಲೂಕು ಯೋಜನಾಧಿಕಾರಿ ರಂಗಸ್ವಾಮಿ, ಬಿ ಆರ್ ಸಿ ನಾಗೇಶ್, ರಾಜಕಾಂತ್, ಕಾಲೇಜಿನ ನಿಲಯ ಪಾಲಕ ಮಹೇಶ್, ಮಹಾದೇವ ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net