ಪೂನಂ ಪಾಂಡೆ ಸಾವಿನ ಸುದ್ದಿ ನಿಜವಾಗಿರುವುದಕ್ಕೆ ಸಾಧ್ಯವಿಲ್ಲ: ಮಾಜಿ ಪತಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

Sam Bombay
Published on

ಮುಂಬೈ: ಬಾಲಿವುಡ್​ ನಟಿ ಪೂನಂ ಪಾಂಡೆ ಅಕಾಲಿಕ ನಿಧನ ಅನೇಕರಿಗೆ ಶಾಕ್​ ನೀಡಿದ್ದು, 32ನೆ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಇದೀಗ ನಟಿಯ ಸುತ್ತ ಅನುಮಾನದ ಹುತ್ತವೇ ನಿರ್ಮಾಣವಾಗಿದ್ದು ಇದೀಗ ದಿವಂಗತ ನಟಿಯ ಮಾಜಿ ಪತಿ ಸ್ಯಾಮ್​ ಬಾಂಬೆ ಪೂನಂ ಅವರ ಸಾವಿನ ಕುರಿತು ಶಂಕಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಆಕೆಯ ಸಾವಿನ ಸುದ್ದಿ ನಿಜವಾಗಲು ಸಾಧ್ಯವಿಲ್ಲ ಈ ಬಗ್ಗೆ ಸಾರ್ವಜನಿಕರು ಪ್ರಶ್ನೆಗಳನ್ನು ಎತ್ತಬೇಕು ಎಂದು ಹೇಳಿದ್ದಾರೆ.

Sam Bombay

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸ್ಯಾಮ್​ ಬಾಂಬೆ, ಪೂನಂ ಸಾವಿಗೆ ಸಂಬಂಧಿಸಿದಂತೆ ಸಂತಾಪ ಸೂಚಿಸಿದ ಪ್ರತಿಯೊಬ್ಬರಿಗೂ ನನ್ನ ನಮನಗಳು. ಇದು ಖಂಡಿತವಾಗಿಯೂ ನಿಜವಾಗಿರುವುದಕ್ಕೆ ಸಾಧ್ಯವಿಲ್ಲ. ಆದರೆ, ನಾನು ನಿಮ್ಮನ್ನು ನಿರ್ಣಯಿಸಲು ಮತ್ತು ಪ್ರಶ್ನೆಗಳನ್ನು ಕೇಳಲು ವಿನಂತಿಸುತ್ತೇನೆ. ಏಕೆಂದರೆ ಇಲ್ಲಿ ಏನೋ ಸರಿ ಇಲ್ಲ ಎಂದು ಅನಿಸುತ್ತಿದ್ದು, ಈ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನು ಎತ್ತಬೇಕು ಎಂದು ಹೇಳಿದ್ದಾರೆ.

2020ರಲ್ಲಿ ಸ್ಯಾಮ್​ ಬಾಂಬೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪೂನಂ ಪಾಂಡೆ ಕೌಟುಂಬಿಕ ಹಿಂಸಾಚಾರದ ಆರೋಪದ ನಂತರ ಅವರು ಒಂದೆರಡು ತಿಂಗಳೊಳಗೆ ಬೇರ್ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net