'ಅಯ್ಯೋ, ಯಾಕಾದ್ರೂ ಹಿಂದುಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದೆನೋ'... ಎಂಬ ಸ್ಥಿತಿ ಎದುರಾಗಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ...!

Imran Khan 1 10 March 20
Published on

ಇಸ್ಲಮಾಬಾದ್​: ಭಾರತ ಬಣ್ಣಗಳ ಹಬ್ಬ ಹೋಳಿ ಸಂಭ್ರಮದಲ್ಲಿದೆ. ಹೋಳಿ ಹಬ್ಬ ಆಚರಿಸುತ್ತಿರುವ ನಮ್ಮ ದೇಶದ ಹಿಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಹಾಗೇ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್​ ನಿನ್ನೆ (ಮಾ.9) ಹೋಳಿ ಹಬ್ಬದ ಶುಭ ಕೋರಿದ್ದರು. ಶಾಂತಿ ಹಾಗೂ ಸಂತೋಷದಿಂದ ಬಣ್ಣಗಳ ಹಬ್ಬವನ್ನು ಆಚರಿಸಿ. ಈ ಹಬ್ಬ ನಮ್ಮ ಹಿಂದು ಸಮುದಾಯಕ್ಕೆ ಭದ್ರತೆ, ನೆಮ್ಮದಿ, ಉಲ್ಲಾಸವನ್ನು ಹೊತ್ತು ತರಲಿ ಎಂದು ಪಾಕಿಸ್ತಾನದ ಪ್ರಧಾನಿ ಟ್ವೀಟ್​ ಮಾಡಿದ್ದರು.

ಆದರೆ ಇಮ್ರಾನ್ ಖಾನ್​ ಟ್ವೀಟ್​ ಪಾಕ್​ ಮುಸ್ಲಿಮರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇಮ್ರಾನ್​ ಟ್ವೀಟ್ ವಿರೋಧಿಸಿ ಪಾಕ್​ನ ಅನೇಕರು ಕಾಮೆಂಟ್​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾ ಮೂಲಕ ಪ್ರಧಾನಿಯನ್ನೇ ನಿಂದಿಸಿದ್ದಾರೆ.

ಮುಸ್ಲಿಂ ಹಬ್ಬಗಳಲ್ಲಿ ಎಂದಿಗೂ ನಮಗೆ ಅಭಿನಂದನೆ, ಶುಭಾಶಯ ತಿಳಿಸದ ಈ ನಕಲಿ ಪ್ರಧಾನಿ ಇಂದು ಹಿಂದುಗಳಿಗೆ ಶುಭಾಶಯ ಕೋರಿದ್ದಾರೆ ಎಂದು ಓರ್ವ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಗೇ ಇನ್ನೋರ್ವರು ಕಾಮೆಂಟ್ ಮಾಡಿ, ಭಾರತದಲ್ಲಿ ಹಿಂದುಗಳು, ಮುಸ್ಲಿಮರಿಗೆ ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲವಾ? ಹಿಂದುಗಳು ನಿಮ್ಮ ಶುಭಹಾರೈಕೆಗಾಗಲೀ, ಅಭಿನಂದನೆಗಾಗಲೀ ಅರ್ಹರಲ್ಲ. ಅವರಿಗೆ ವಿಶ್​ ಮಾಡುವ ಮೂಲಕ ನೀವು ಹಿಂದುಗಳ ಭಾವನೆಗೆ ನೋವುಂಟು ಮಾಡಬೇಡಿ ಎಂದು ಹೇಳಿದ್ದಾರೆ.

ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗುತ್ತಿದೆ. ಆದರೆ ನೀವಿಲ್ಲಿ ಹಿಂದುಗಳಿಗೆ ಗೌರವ, ಪ್ರೀತಿಯಿಂದ ಹೋಳಿ ಶುಭಾಶಯ ಕೋರುತ್ತಿದ್ದೀರಿ ಎಂದು ಮತ್ತೋರ್ವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net