ಗ್ರಾಪಂ ಕೆಲವು ನೌಕರರಿಗೆ ಮೊಬೈಲ್ ಆಪ್ ಹಾಜರಾತಿಗೆ ಅವಕಾಶ|Mobile app attendance

Vidhanasoudha
Published on

ಬೆಂಗಳೂರು: ಗ್ರಾಮ ಪಂಚಾಯಿತಿ ಕರವಸೂಲಿಗಾರರು, ಸ್ವಚ್ಛತಾಗಾರರು, ನೀರಗಂಟಿಗಳಿಗೆ ಪಂಚತಂತ್ರ 2.0 ಮೊಬೈಲ್ ಆಪ್ ಮೂಲಕ ಇ-ಹಾಜರಾತಿ ದಾಖಲಿಸಲು ಅವಕಾಶ(Some Gram Panchayat employees allowed to use mobile app attendance) ಕಲ್ಪಿಸಿ ಪಂಚಾಯತ್ ರಾಜ್ ಆಯುಕ್ತಾಲಯ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ(ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್/ಡೇಟಾ ಎಂಟ್ರಿ ಅಪರೇಟರ್, ಸ್ವಚ್ಛತಾಗಾರರು, ನೀರಗಂಟಿ)ಗಳು ಪ್ರತಿದಿನ ಪಂಚತಂತ್ರ 2.0 ತಂತ್ರಾಂಶದಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವಂತೆ ಹಾಗೂ ಪ್ರತಿ ತಿಂಗಳ ವೇತನವನ್ನು ಬಯೋಮೆಟ್ರಿಕ್ ಹಾಜರಾತಿ ಆಧಾರದ ಮೇಲೆ ಪಾವತಿಸುವಂತೆ ಈ ಹಿಂದೆ ತಿಳಿಸಲಾಗಿತ್ತು.

ಆದರೆ, ಕರವಸೂಲಿಗಾರರು, ಸ್ವಚ್ಛತಾಗಾರರು ಮತ್ತು ನೀರುಗಂಟಿಗಳ ಕರ್ತವ್ಯ ಕ್ಷೇತ್ರದಲ್ಲಿರುವುದರಿಂದ ಇವರುಗಳು ನಿಗದಿತ ಸಮಯದಲ್ಲಿ ಕಚೇರಿಗೆ ಹಾಜರಾಗಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಹಾಜರಾತಿ ದಾಖಲಿಸುವುದು ಸಾಧ್ಯವಾಗದೇ ಇರುವುರಿಂದ ಅವರುಗಳಿಗೆ ಪಂಚತಂತ್ರ 2.0 ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಇವರು ಪಂಚತಂತ್ರ 2.0 ಮೊಬೈಲ್ ಆಪ್ ಮೂಲಕ ಇ-ಹಾಜರಾತಿ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಸುತ್ತೋಲೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net