ಮನೆ ಇಲ್ಲದವರಿಗೆ ಗುಡ್​ ನ್ಯೂಸ್ ಕೊಟ್ಟ ಸಚಿವ ಸೋಮಣ್ಣ

V SOMANNA
Published on

ಬೆಂಗಳೂರು: 2021ರ ಜೂನ್​ ಒಳಗೆ ನಾನು ಅಂದುಕೊಂಡ ಗುರಿಯನ್ನು ಸಾಧಿಸುವೆ. ತಪ್ಪಿದ್ದಲ್ಲಿ ಮಂತ್ರಿ ಸ್ಥಾನ ಮಾತ್ರವಲ್ಲ, ರಾಜಕಾರಣವನ್ನೇ ಬಿಟ್ಟು ಹೋಗುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಹೌದು, ಇಂತಹ ಸವಾಲು ಹಾಕೋಕು ಕಾರಣ ಇದೆ. ಈ ಬಗ್ಗೆ ವಿಧಾನಸೌಧದಲ್ಲಿ ಬುಧವಾರ ಸಚಿವರೇ ಮಾತನಾಡಿದರು.

2016ರಿಂದ ಇದುವರೆಗೂ ಫಲಾನುಭವಿಗಳಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಈ ಬಗ್ಗೆ ನನ್ನ ಮನಸ್ಸಿಗೆ ತುಂಬಾ ನೋವಿದೆ. ಇದನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ಜೂನ್​ ಒಳಗೆ 25 ಸಾವಿರ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತೇನೆ. ಜೂನ್​ ಒಳಗೆ ಮನೆ ನೀಡದಿದ್ರೆ ನಾನು ರಾಜಕಾರಣವನ್ನೇ ಬಿಟ್ಟು ಹೋಗುತ್ತೇನೆ ಎಂದು ಸೋಮಣ್ಣ ಶಪಥ ಮಾಡಿದರು.

ಅರ್ಹ ಫಲಾನುಭವಿಗಳಿಗೆ ಮನೆ ಕೊಡುವ ಕೆಲಸವನ್ನು ಮಾಡಿಯೇ ತೀರುತ್ತೇನೆ ಎಂದ ಸಚಿವರ ಭರವಸೆ, ಸೂರಿಗಾಗಿ ಕಾಯುತ್ತಿರುವವರ ಮೊಗದಲ್ಲಿ ನೆಲೆ ಸಿಗುವ ಆಶಾಕಿರಣದ ಗೆರೆ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net