ಕ್ವಾರಂಟೈನ್ ಅಂದ್ರೆ ಹೀಗಿರಬೇಕು... ರಜೆಗೆ ಬಂದ ಸೈನಿಕರು ಹೊಲದಲ್ಲೇ ಏಕಾಂತ ವಾಸ

yodha
Published on

ಗದಗ: ರಜೆ ಮೇರೆಗೆ ಸ್ವಗ್ರಾಮಕ್ಕೆ ಬಂದ ಯೋಧರಿಬ್ಬರು ಜಮೀನಿನಲ್ಲಿ ಟೆಂಟ್​ ಹಾಕಿಕೊಂಡು ಸ್ವಯಂ ಕ್ವಾರಂಟೈನ್​ ಆಗಿರುವ ಎರಡು ಪ್ರತ್ಯೇಕ ಪ್ರಕರಣಗಳು ಇತರರಿಗೆ ಮಾದರಿಯಾಗಿವೆ.

ಅರುಣಾಚಲ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗದಗ ತಾಲೂಕಿನ ಅಂತೂರು​ ಜು.3ರಂದು ವಿಮಾನ ಮೂಲಕ ಬೆಂಗಳೂರಿಗೆ ಬಂದರು. ಅಲ್ಲಿಂದ ಜಿಲ್ಲೆಗೆ ಬಂದ ಕೂಡಲೇ ಪ್ರಕಾಶ್​, ಮನೆ ಹಾಗೂ ಗ್ರಾಮಕ್ಕೆ ಹೋಗದೆ ನೇರವಾಗಿ ಜಮೀನಿಗೆ ಬಂದಿದ್ದಾರೆ. ಟ್ರ್ಯಾಕ್ಟರ್​ ಟ್ರೇಲರ್​ ಮೇಲೆ ತಾಡಪತ್ರಿ ಹಾಕಿ, ಅದರ ಸುತ್ತು ಬೇಲಿ ಹಾಕಿಕೊಂಡು 5 ದಿನಗಳಿಂದ ತನ್ನಷ್ಟಕ್ಕೇ ತಾನೇ ದಿಗ್ಬಂಧನ ಹಾಕಿಕೊಂಡಿದ್ದಾರೆ. ಇದನ್ನೂ ಓದಿರಿ ಸಿಎಂ ಕಚೇರಿ-ನಿವಾಸದಲ್ಲಿ 7 ಮಂದಿಗೆ ಕರೊನಾ ಸೋಂಕು, ಹೋಂ ಕ್ವಾರಂಟೈನ್​ನಲ್ಲಿ ಯಡಿಯೂರಪ್ಪ

ನಿಯಮದಂತೆ ಯೋಧ ಪ್ರಕಾಶ​ ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿ ನೆಗೆಟಿವ್​ ಬಂದಿದೆ. ಆದರೂ, 14 ದಿನ ಹೋಂ ಕ್ವಾರಂಟೈನ್​ ಆಗಬೇಕೆಂದು ಆರೋಗ್ಯ ಇಲಾಖೆ ಸೂಚನೆ

ಬೆಂತೂರು ಗ್ರಾಮದ ಯೋಧ ಪ್ರಕಾಶ ಹೈಗರ್.
ಬೆಂತೂರು ಗ್ರಾಮದ ಯೋಧ ಪ್ರಕಾಶ ಹೈಗರ್.

ನೀಡಿದೆ. ಯೋಧ ಪ್ರಕಾಶ ಅವರದ್ದು ಅವಿಭಕ್ತ ಕುಟುಂಬ. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳು, ತಂದೆ, ತಾಯಿ ಸೇರಿ 15ಕ್ಕೂ ಹೆಚ್ಚು ಜನರಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರಿಗೆ ತೊಂದರೆ ಆಗಬಾರದೆಂದು 2 ಕಿಮೀ ದೂರದಲ್ಲಿರುವ ಸ್ವಂತ ಜಮೀನಿನಲ್ಲಿ ತಾತ್ಕಾಲಿಕ ಶೆಡ್​ ಹಾಕಿಕೊಂಡು ವಾಸವಾಗಿದ್ದಾರೆ.

ಪ್ರಕಾಶ ಅವರು 14 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಡಾಖ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ 30 ದಿನಗಳ ರಜೆ ಮೇರೆಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಕ್ವಾರಂಟೈನ್​ ಸಮಯ ಮುಗಿದ ಬಳಿಕ ಮನೆಗೆ ತೆರಳಿ ಮಕ್ಕಳು ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ಇನ್ನು ಹಿರಿಯೂರಿನ ಖಂಡೇನಹಳ್ಳಿಯಲ್ಲೂ ಬಿಎಸ್​ಎಫ್​ ಯೋಧ ಯೋಗೇಶ್​ ಜಮೀನಿನಲ್ಲೇ ಕ್ವಾರಂಟೈನ್​ ಆಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗ್ರಾಮಸ್ಥರ ಸುರಕ್ಷತೆ ಹಾಗೂ ಸರ್ಕಾರದ ನಿಯಮ ಪಾಲಿಸಲು ಕರ್ನಾಟಕ ಮತ್ತು ಆಂಧ್ರ ಗಡಿಯ ಜಮೀನಿನಲ್ಲಿ ಟೆಂಟ್​ ನಿಮಿರ್ಸಿಕೊಂಡು ಸ್ವಯಂ ಕ್ವಾರಂಟೈನ್​ ಆಗಿರುವ ಯೋಗೇಶ್​, ಜು.5ರಂದು ರಜೆ ಮೇರೆಗೆ ಝಾನ್ಸಿಯಿಂದ ಸ್ವಗ್ರಾಮಕ್ಕೆ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net