ಸೈನಿಕನನ್ನು ಕೊಲೆ ಮಾಡಿದ ಲೀವ್ ಇನ್ ರಿಲೇಷನ್​ ಶಿಪ್​ನಲ್ಲಿದ್ದ ಗೆಳತಿ | live-in Relationship

Murder -up
Published on

live-in Relationship: ಲಿವಿಂಗ್ ಇನ್ ರಿಲೇಷನ್​​ಶಿಪ್​ನಲ್ಲಿದ್ದ ಗೆಳತಿಯೊಬ್ಬಳು ತನ್ನ ಗೆಳಯನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನಜೀಬಾಬಾದ್​ನ ಆದರ್ಶನಗರದಲ್ಲಿ ಬೆಳಕಿಗೆ ಬಂದಿದೆ.

ಅಮಿತ್ ಸಾಗರ್(32) ಮೃತ. ಅಮಿತ್​ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದನು. ಮೃತನ ತಾಯಿ ಕಾಂತಿದೇವಿ ನೀಡಿದ ದೂರಿನನ್ವಯ ಗೆಳತಿ ಮಮತಾಳನ್ನು ಪೊಲೀಸರು ಬಂಧಿಸಿದ್ದಾರೆ.

ಅಮಿತ್ ಸಾಗರ್ ಮತ್ತು ಮಮತಾ ಕಳೆದ ಮೂರು ವರ್ಷಗಳಿಂದ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದರು. ಈ ವೇಳೆ ಅಮಿತ್ ಸಾಗರ್​ ಹಾಗಾಗ ಕುಡಿದು ಬಂದು ಮಮತಾ ಮೇಲೆ ಹಲ್ಲೆ ಮಾಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಕೊಲೆ ಮಾಡಿರುವುದಾಗಿ ಪೊಲೀಸ್​ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲದೆ, ಗೆಳೆಯನನ್ನು ಕೊಲೆ ಮಾಡಿ ಸಹಜ ಮೃತ ಎಂದು ಬಿಂಬಿಸಲು ಆಸ್ಪತ್ರೆಗೆ ಸೇರಿಸಿದ್ದಳು ಎಂದು ನಜೀಬಾಬಾದ್ ಸರ್ಜಲ್ ಇನ್ಸ್​ಪೆಕ್ಟರ್ ನಿತೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net