ಪ್ರೀತಿಗೆ ಬಲಿಯಾದ ಯೋಧ; ರಜೆ ಮೇಲೆ ಬಂದಿದ್ದ ಸೈನಿಕನನ್ನು ಗುಂಡಿಟ್ಟು ಹತ್ಯೆ!

Pub crime
Published on

ನವದೆಹಲಿ: ರಜೆ ಮೇಲೆ ಬಂದಿದ್ದ ಯೋಧ ಪ್ರೀತಿಗೆ ಬಲಿಯಾಗಿದ್ದಾನೆ. ಆರೋಪಿಗಳು ಸೈನಿಕನಿಗೆ ಗುಂಡಿಟ್ಟು ಕೊಂದಿದ್ದಲ್ಲದೆ, ಆತನ ಕಾರನ್ನೂ ಹಾನಿಗೊಳಿಸಿದ್ದಾರೆ. ಉತ್ತರಪ್ರದೇಶದ ಅಲಿಘರ್​ನಲ್ಲಿ ಈ ಕೊಲೆ ನಡೆದಿದೆ.

ಉತ್ತರಪ್ರದೇಶದ ತಪ್ಪಲ್ ಪೊಲೀಸ್​ ಠಾಣಾ ವ್ಯಾಪ್ತಿಯ ರಸೂಲ್​ಪುರ ಗ್ರಾಮದಲ್ಲಿ ಭಾನುವಾರ ಸಂಜೆ ಮನೆಯಿಂದ ಹೊರಗೆ ಹೊರಟಿದ್ದ ಯೋಧನನ್ನು ಗುಂಡಿಟ್ಟು ಕೊಂದು, ಆತನ ಕಾರನ್ನು ಜಖಂಗೊಳಿಸಿ ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರೂಪಿಸಲಾಗಿದೆ.

ಹತ್ಯೆಗೀಡಾದ ಯೋಧನ ಪತ್ನಿ ಅರುಷಿ ನೀಡಿದ ಮಾಹಿತಿ ಪ್ರಕಾರ, ಪತಿ ಅ. 21ರಂದು ರಜೆ ಮೇಲೆ ಮನೆಗೆ ಮರಳಿದ್ದು, ನಂತರ ಇಬ್ಬರೂ ಜತೆಯಾಗಿ ಆಕೆಯ ತಾಯಿಯ ಮನೆಗೆ ಹೋಗಿದ್ದರು. ಒಂದು ದಿನ ಅಲ್ಲಿದ್ದ ಬಳಿಕ ಪತಿ ತನ್ನ ಮನೆಗೆ ಕರೆದೊಯ್ದಿದ್ದು, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೊರಗೆ ಹೊರಟಿದ್ದಾಗ ಈ ಪ್ರಕರಣ ನಡೆದಿದೆ ಎಂದು ಆಕೆ ತಿಳಿಸಿದ್ದಾರೆ. ಯೋಧನ ಪ್ರೇಮಪ್ರಕರಣದ ಹಿನ್ನೆಲೆಯಲ್ಲಿ ಹೀಗಾಗಿದೆ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net