ಅತ್ಯಾಚಾರ ಆರೋಪಕ್ಕೀಡಾದ ಇನ್​ಸ್ಪೆಕ್ಟರ್ ಸಸ್ಪೆಂಡ್; ಪ್ರಕರಣಕ್ಕೀಗ ಮಹತ್ವದ ತಿರುವು!

Police
Published on

ಚಿತ್ರದುರ್ಗ: ಅತ್ಯಾಚಾರ ಆರೋಪಕ್ಕೀಡಾಗಿ ಇನ್​ಸ್ಪೆಕ್ಟರ್ ಅಮಾನತುಗೊಂಡಿರುವ ಬೆನ್ನಿಗೇ ಈ ಪ್ರಕರಣದಲ್ಲಿ ಮಹ್ವದ ತಿರುವು ಕಂಡುಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತಗೊಳಿಸಿದ ಆರೋಪ ಹೊರಿಸಲಾಗಿದ್ದು, ಚಿತ್ರದುರ್ಗದ ಮಹಿಳಾ ಪೊಲೀಸ್​ ಠಾಣೆಯಲ್ಲಿ ಸಂತ್ರಸ್ತೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಅತ್ಯಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ. ಉಮೇಶ್ ಅವರನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಸೋಮವಾರ (ಅ.24) ಆದೇಶ ಹೊರಡಿಸಿದ್ದಾರೆ. ಆದರೆ ಇದರ ಬೆನ್ನಿಗೇ ಈ ಪ್ರಕರಣದಲ್ಲಿ ಮಹತ್ವ ತಿರುವು ಉಂಟಾಗಿದೆ.

ಇನ್​ಸ್ಪೆಕ್ಟರ್ ವಿರುದ್ಧ ದೂರು ದಾಖಲಿಸಿದ್ದ ಸಂತ್ರಸ್ತ ಯುವತಿಯೇ ಪುನಃ ಮಹಿಳಾ ಠಾಣೆಗೆ ಆಗಮಿಸಿ ಮರು ಹೇಳಿಕೆ ದಾಖಲಿಸಿದ್ದಾರೆ. ಸಿಪಿಐ ಉಮೇಶ್ ಅವರಿಂದ ಲೈಂಗಿಕ ದೌರ್ಜನ್ಯ ಆಗಿಲ್ಲ. ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ ಎಂದು ಯುವತಿ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net