ಸೋಲಾರ್​ ಷೇರು 5 ವರ್ಷಗಳಲ್ಲಿ 61804% ಏರಿಕೆ: 1 ಲಕ್ಷವಾಯ್ತು 6 ಕೋಟಿ ರೂಪಾಯಿ

indian stock market
Published on

ಮುಂಬೈ: ಸೋಲಾರ್​ ಸಿಸ್ಟಮ್​ ತಯಾರಿಸುವ ಹಾಗೂ ಅಳವಡಿಕೆ ಮಾಡುವ ಈ ಕಂಪನಿಯ ಷೇರು ಬೆಲೆ ಕಳೆದ 5 ವರ್ಷಗಳಲ್ಲಿ ಶೇಕಡಾ 61804ರಷ್ಟು ಏರಿಕೆ ಕಾಣುವ ಮೂಲಕ ಹೂಡಿಕೆದಾರರನ್ನು ಕೋಟ್ಯಧಿಪತಿಗಳಾಗಿವೆ ಮಾಡಿವೆ.

ಇಂತಹ ಅದ್ಭುತ ಷೇರು ವಾರಿ ರಿನ್ಯೂವಬಲ್ ಟೆಕ್ನಾಲಜೀಸ್ (Vari Renewable Technologies) ಕಂಪನಿಯದ್ದಾಗಿದೆ. ಈ ಕಂಪನಿಯ ಷೇರು ಕೇವಲ 5 ವರ್ಷಗಳಲ್ಲಿ 1 ಲಕ್ಷ ರೂ.ಗಳ ಹೂಡಿಕೆಯನ್ನು 6.1 ಕೋಟಿ ರೂ.ಗೆ ಏರಿಸುವ ಮೂಲಕ ಹೂಡಿಕೆ ಮಾಡಿದವರನ್ನು ಕುಬೇರರನ್ನಾಗಿಸಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 20.45 ಸಾವಿರ ಕೋಟಿ ರೂ. ಇದೆ.

ಜೂನ್ 28, 2019 ರಂದು, ಈ ಷೇರು ಬೆಲೆ ಕೇವಲ 3.15 ರೂ.ಇತ್ತು. ಈಗ ಅದು 1950 ರೂ.ಗೆ ಏರಿಕೆಯಾಗಿದೆ.
ಈ ಅವಧಿಯಲ್ಲಿ ಅದು ಶೇ. 61804ರಷ್ಟು ಭರ್ಜರಿ ಏರಿಕೆಯನ್ನು ಈ ಷೇರು ದಾಖಲಿಸಿದೆ.

ಒಂದು ವರ್ಷದಲ್ಲಿ 769% ಕ್ಕಿಂತ ಹೆಚ್ಚು ಏರಿಕೆಯನ್ನು ಕಂಡಿದೆ. ಈ ಮೂಲಕ ಕೇವಲ ಒಂದೇ ವರ್ಷದಲ್ಲಿ 1 ಲಕ್ಷ ರೂ.ಗಳ ಹೂಡಿಕೆಯನ್ನು 7.70 ಲಕ್ಷ ರೂ.ಗೆ ಹೆಚ್ಚಿಸಿದೆ. ಕಳೆದ 6 ತಿಂಗಳಲ್ಲಿ ಈ ಷೇರು ಬೆಲೆ 342% ಏರಿಕೆ ದಾಖಲಿಸಿದೆ.

ಈಗ ಈ ಸ್ಟಾಕ್ ರೂ 2024ರ ಬೆಲೆಯಲ್ಲಿ ಪ್ರಾರಂಭವಾಗಿ, ರೂ 2030ರ ಬೆಲೆ ತಲುಪಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 3037.75 ಮತ್ತು ಕನಿಷ್ಠ ಬೆಲೆ ರೂ 213.01 ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net