ಗೌತಮ್​ ಅದಾನಿ ಕಂಪನಿ ಷೇರು ಬೆಲೆ ಕುಸಿತ: ಒಎಫ್​ಎಸ್ ಹಂಚಿಕೆ ಮಾಡುತ್ತಿರುವುದೇ ಇದಕ್ಕೆ ಕಾರಣ…

adani-19
Published on

ಮುಂಬೈ: ಭಾರತದ ಕುಬೇರ ಗೌತಮ್​ ಅದಾನಿ ಅವರ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಬುಧವಾರ ಭಾರೀ ಕುಸಿತವಾಗಿದೆ.

ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅದಾನಿ ಅವರ ಸಿಮೆಂಟ್​ ಕಂಪನಿಯಾದ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ 6 ಪ್ರತಿಶತದಷ್ಟು ಕುಸಿತ ಕಂಡವು. ಈ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಕನಿಷ್ಠ 96.55 ರೂ. ಮುಟ್ಟಿದವು. ದಿನದ ಅಂತ್ಯದಲ್ಲಿ ಶೇ. 1.02ರಷ್ಟು ಕುಸಿತ ಕಂಡು ರೂ. 103.30ಕ್ಕೆ ಮುಟ್ಟಿದವು.

ಈ ಷೇರುಗಳ ಈ ಕುಸಿತಕ್ಕೆ ಒಂದು ಪ್ರಮುಖ ಕಾರಣವಿದೆ. ಮಂಗಳವಾರ ಕಂಪನಿಯು ತನ್ನ ಪ್ರವರ್ತಕರಾದ ಅಂಬುಜಾ ಸಿಮೆಂಟ್ಸ್ ಮತ್ತು ರವಿ ಸಂಘಿ ಕಂಪನಿಯಲ್ಲಿನ ಶೇ. 3.52 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (ಒಎಫ್​ಎಸ್​) ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿತು. ಇದೇ ಕಾರಣಕ್ಕಾಗಿ ಬುಧವಾರ ಷೇರುಗಳ ಬೆಲೆಯಲ್ಲಿ ಸಾಕಷ್ಟು ಕುಸಿತ ಕಂಡಬಂದಿದೆ.

ಒಎಫ್​ಎಸ್​ ಷೇರುಗಳ ಮಾರಾಟವನ್ನು ಜೂನ್ 26-27 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಷೇರಿಗೆ ರೂ 90ರ ಬೆಲೆಯಲ್ಲಿ ಒಎಫ್​ಎಸ್​ ಷೇರು ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಈ ಷೇರಿನ ಮಂಗಳವಾರದ ಮುಕ್ತಾಯದ ದರ ಮಟ್ಟವಾದ ರೂ 102ಕ್ಕೆ ಹೋಲಿಸಿದರೆ ಒಎಫ್​ಎಸ್​ ಷೇರು ಬೆಲೆಯು ಅಂದಾಜು 12 ಪ್ರತಿಶದಷ್ಟು ಕಡಿಮೆ ಇದೆ.

ಚಿಲ್ಲರೆಯಲ್ಲದ ಲ್ಲದ ಹೂಡಿಕೆದಾರರಿಗೆ ಜೂನ್ 26 ರಂದು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಜೂನ್ 27 ರಂದು ಒಎಫ್​ಎಸ್​ ಷೇರುಗಳನ್ನು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.

ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 156.20 ಮತ್ತು ಕನಿಷ್ಠ ಬೆಲೆ ರೂ 68.50 ಆಗಿದೆ.

ಕಳೆದ ಐದು ದಿನಗಳಲ್ಲಿ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ ಶೇ.3ರಷ್ಟು ಏರಿಕೆ ಕಂಡಿದೆ. ಈ ಷೇರು ಬೆಲೆ ಒಂದು ತಿಂಗಳಲ್ಲಿ 10%; ಒಂದು ವರ್ಷದಲ್ಲಿ 45% ಮತ್ತು 5 ವರ್ಷಗಳಲ್ಲಿ 65% ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಈ ಷೇರಿನ ಬೆಲೆ 20% ನಷ್ಟು ಕುಸಿತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net