

ಸಿರವಾರ: ಪಪಂ ಕಚೇರಿಯಲ್ಲಿ ಸೋಮವಾರ ಕನಕದಾಸರ ಜಯಂತಿ ಆಚರಿಸಲಾಯಿತು.
ಪಪಂ ಅಧ್ಯಕ್ಷ ವೈ.ಭೂಪನಗೌಡ ಮಾತನಾಡಿ, ಕನಕದಾಸರು ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದಿದ್ದಾರೆ. ಸಮಾಜ ಸುಧಾರಣೆಗಾಗಿ ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಪಪಂ ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ ನಾಯಕ, ಸದಸ್ಯರಾದ ಹಸೇನ್ ಅಲೀ ಸಾಬ್, ಕೃಷ್ಣನಾಯಕ, ಮೌಲಸಾಬ್ ವರ್ಚಸ್, ಗಡ್ಲ ಚನ್ನಪ್ಪ, ಹಾಜಿ ಚೌದ್ರಿ, ನಾಮ ನಿರ್ದೇಶನಕ ಮಲ್ಲಿಕಾರ್ಜುನ್, ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್, ಸಿಬ್ಬಂದಿ ಸಚಿನ್ ಚ್ಯಾಗಿ, ಇಸ್ಮಾಯಿಲ್ ಪ್ರಮುಖರಾದ ಬಸವರಾಜ ಬೆಣ್ಣಿ, ಮಲ್ಲಪ್ಪ ಕಜ್ಜಿ, ವಿನಯ ಕುಮಾರ, ಅರುಣ್ ಕುಮಾರ, ನಾಗರಾಜ, ಬಂದೇನವಾಜ ಇತರರಿದ್ದರು.