ಗುರುವಿನ ತತ್ವದಂತೆ ಸಮಾಜಮುಖಿ ಕೆಲಸ

ಪ್ರಥಮ ಸ್ಥಾನ ಪಡೆದುಕೊಂಡ ಎನ್‌ಎಫ್‌ಸಿ ತಂಡ.
ಪ್ರಥಮ ಸ್ಥಾನ ಪಡೆದುಕೊಂಡ ಎನ್‌ಎಫ್‌ಸಿ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜಮುಖಿ ಚಟುವಟಿಕೆಗಳಲ್ಲಿ ಉತ್ತೇಜನ
  • ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯ
ಗುರುಪುರ: ಬ್ರಹ್ಮಶ್ರೀ ನಾರಾಯಣಗುರುಗಳ ಸಾರ್ವಕಾಲಿಕ ತತ್ವದಂತೆ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದಡಿ ರಾಜ್ಯವ್ಯಾಪಿ ಸಂಘಟನೆ ಹೊಂದಿರುವ ಯುವವಾಹಿನಿ ಕುಪ್ಪೆಪದವು ಎಡಪದವು ಘಟಕ ಯುವಕರಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಉತ್ತೇಜನ ನೀಡುತ್ತಾ ಬಂದಿದೆ. ಇದು ಉತ್ತಮ ಬೆಳವಣಿಗೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.
ಯುವವಾಹಿನಿ ಕುಪ್ಪೆಪದವು ಎಡಪದವು ಘಟಕ ವತಿಯಿಂದ ವಿದ್ಯಾನಿಧಿ ಸಹಾಯಾರ್ಥ ಕಿಲೆಂಜಾರು ಅರಮನೆ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯುವವಾಹಿನಿ ಕುಪ್ಪೆಪೆದವು ಎಡಪದವು ಘಟಕ ಅಧ್ಯಕ್ಷ ಶ್ರೀಧರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವರಾಹ ಫೌಂಡೇಶನ್ ಮಂಗಳೂರು ಸ್ಥಾಪಕಾಧ್ಯಕ್ಷ ಗಿರೀಶ್ ಆಳ್ವ, ಸರಿತಾ ಸುವರ್ಣ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಕ್ಷಿತ್ ಕುಮಾರ್, ಘಟಕದ ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್ ನಾಗಂದಡಿ, ಜಗದೀಶ ದುರ್ಗಾಕೋಡಿ, ಕಾರ್ಯದರ್ಶಿ ಅಕ್ಷತಾ, ಪ್ರಮುಖರಾದ ಸುಕುಮಾರ ಅಮೀನ್, ಸಂಘಟನೆ ಪದಾಧಿಕಾರಿಗಳು, ಸದಸ್ಯರು ಇದ್ದರು. ಅಕ್ಷಿತ್ ಕುಮಾರ್ ಸ್ವಾಗತಿಸಿದರು. ಸಂತೋಷ್ ಬೊಳಿಯ ವಂದಿಸಿದರು. ಕ್ರಿಕೆಟ್ ಪಂದ್ಯಾಟದಲ್ಲಿ ಎನ್‌ಎ್ಸಿ ಕುಪ್ಪೆಪದವು ಪ್ರಥಮ ಸ್ಥಾನ, ಸೆಮಿ ಲೂನಾರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net