ಸೋಷಿಯಲ್​ ಮೀಡಿಯಾ ಪೋಸ್ಟ್‌ನಿಂದ ಕೋಮು ಗಲಭೆ!; 10 ಜನರ ಬಂಧನ

Untitled design (74)
Published on

ಗುಜರಾತ್​: ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ನಿಂದ ಕೋಮು ಘರ್ಷಣೆ ಭುಗಿಲೆದ್ದು, ಎರಡು ಗುಂಪುಗಳ ನಡುವೆ ತೀವ್ರ ಹೊಡೆದಾಟ ನಡೆದಿದೆ. ಇದರಿಂದ ಎಂಟು ಜನರು ಗಂಭೀರ ಗಾಯಗೊಂಡಿದ್ದು, ಇಲ್ಲಿಯವರೆಗೂ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಜುಲೈ 16ರ ರಾತ್ರಿ ಬಲಿಸಾನಾ ಪಟ್ಟಣದಲ್ಲಿ ಈ ಘರ್ಷಣೆ ಸಂಭವಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್‌ ಕುರಿತು ಹಲವರ ನಡುವೆ ಗಲಭೆ ನಡೆದಿದ್ದು, ಪೊಲೀಸರು ಜಟಾಪಟಿಗೆ ಕಾರಣವೇನು ಎಂಬುದನ್ನು ಸದ್ಯ ಬಹಿರಂಗಪಡಿಸಿಲ್ಲ. ಆದ್ರೆ, ಒಂದು ಸಿನಿಮಾ ವಿಚಾರವಾಗಿ ಈ ಪ್ರಚೋದನಕಾರಿ ಪೋಸ್ಟ್​ ಹೊರಬಂದು ಗಲಾಟೆ ಸೃಷ್ಟಿಯಾಗಿದೆ ಎಂದು ಪೊಲೀಸರು ವರದಿಯಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ.

"ನಾವು ಇದುವರೆಗೂ ಎರಡೂ ಕಡೆಯ ಹತ್ತು ಜನರನ್ನು ಬಂಧಿಸಿದ್ದೇವೆ. ಅವರಲ್ಲಿ ಸೋಮವಾರ ಒಂದು ಕಡೆಯಿಂದ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಮಂಗಳವಾರ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ" ಎಂದು ಬಲಿಸಾನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆಎಸ್ ಚೌಧರಿ ಮಾಹಿತಿ ನೀಡಿದ್ದಾರೆ. ಹತ್ತು ಆರೋಪಿಗಳ ವಿರುದ್ಧ ಗಲಭೆ, ಹಲ್ಲೆ ಮತ್ತು ಕೊಲೆ ಯತ್ನ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net