

ಹೈದ್ರಾಬಾದ್: ನಟಿ ಸೋಭಿತಾ ಧೂಳಿಪಾಲ ಅವರು ನಟ ನಾಗ ಚೈತನ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿ 2024 ಡಿಸೆಂಬರ್ 4ರಂದು ಮದುವೆ ಕೂಡಾ ನಡೆಯಲಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ.
ನಾಗ ಚೈತನ್ಯ ಅವರನ್ನು ಭೇಟಿಯಾಗುವ ಮುನ್ನ ಶೋಭಿತಾ ಖ್ಯಾತ ಫ್ಯಾಷನ್ ಡಿಸೈನರ್ ಪ್ರಣವ್ ಮಿಶ್ರಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದರು. ಅವರು ಹ್ಯೂಮನ್ ಬ್ರಾಂಡ್‌ನ ಸಹ-ಸಂಸ್ಥಾಪಕರೂ ಹೌದು. ಸದ್ಯ ಪ್ರಣವ್ ಆ ಕಂಪನಿಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
2019 ರಲ್ಲಿ ಫ್ಯಾಷನ್ ಈವೆಂಟ್‌ನಲ್ಲಿ ಭೇಟಿಯಾದರು, ಪ್ರವಾಸಕ್ಕೂ ಕೂಡಾ ಹೋಗಿದ್ದರು ಮತ್ತು ಆಗಾಗ್ಗೆ ಪರಸ್ಪರರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುತ್ತಿದ್ದರು. ಅವರ ಪ್ರೇಮ ಸಂಬಂಧವು ಅಲ್ಪಕಾಲಿಕವಾಗಿತ್ತು ಮತ್ತು ಕೆಲವು ಕಾರಣಗಳಿಂದ ಈ ಜೋಡಿ ಬೇರ್ಪಟ್ಟರು.
ನಾಗ ಚೈತನ್ಯ ತನ್ನ ಮೊದಲ ಪತ್ನಿ ಸಮಂತಾ ಅವರಿಂದ ಬೇರ್ಪಟ್ಟ ನಂತರ, ಅವರು ಮತ್ತು ಸೋಭಿತಾ, ನಾಗ ಚೈತನ್ಯ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಮಾರ್ಚ್ 2023 ರಲ್ಲಿ, ಇಬ್ಬರೂ ಲಂಡನ್ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು, ಇದು ಅವರ ಪ್ರಣಯದ ವದಂತಿಗಳನ್ನು ಹುಟ್ಟುಹಾಕಿತು. ಚೈತನ್ಯ ಮತ್ತು ಶೋಭಿತಾ ಪ್ರೀತಿಸುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು.