ನದಿ ಸಮೀಪ ಸೋಪು, ಶಾಂಪೂ ನಿರ್ಬಂಧ

2-67cdcf53d8fb4
Published on

ಬೆಂಗಳೂರು: ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿಯ ದಂಡೆ, ಸ್ನಾನಘಟ್ಟದಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿ ಎಸೆದು ಹೋಗುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ.

ಈ ಸಂಬಂಧ ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಟಿಪ್ಪಣಿಯ ಮೂಲಕ ಸೂಚನೆ ನೀಡಿರುವ ಅವರು, ಸ್ನಾನಘಟ್ಟಗಳಲ್ಲಿ ಭಕ್ತರು ಶಾಂಪೂ, ಸೋಪು ಬಳಸಿ ಸ್ನಾನ ಮಾಡಿ ಉಳಿದ ತುಂಡು ಮತ್ತು ಶಾಂಪೂ ಪ್ಯಾಕೆಟ್ ಬಿಟ್ಟು ಹೋಗುತ್ತಿದ್ದು, ಇದೆಲ್ಲ ನದಿ ಸೇರಿ ನೊರೆ ಉಕ್ಕುತ್ತಿದೆ, ನೀರು ಕಲುಷಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ, ಕೊಳ, ಸರೋವರದ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ನದಿ, ಸರೋವರ, ಕೊಳ, ಕಲ್ಯಾಣಿಗಳಲ್ಲಿ ಭಕ್ತರು ತಾವು ಉಟ್ಟ ಬಟ್ಟೆಯನ್ನು ವಿಸರ್ಜಿಸದಂತೆ ನಿರ್ಬಂಧಿಸಲೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net