

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ 11ನೇ ವಾರಕ್ಕೆ ಕಾಲಿಟ್ಟು, 9ನೇ ವಾರಕ್ಕೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಸ್ನೇಹಿತ್, ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ತಮ್ಮ ಅನುಭವಗಳನ್ನು ವೀಕ್ಷಕರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡ ಸ್ನೇಹಿತ್, ಸಂಗೀತಾ ಮತ್ತು ಕಾರ್ತಿಕ್ ಇಬ್ಬರ ನಡುವಿನ ಸಂಬಂಧ ಪ್ರೀತಿನಾ? ಸ್ನೇಹನಾ? ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರಕ್ಕಿಂತ ಮುಂಚಿತವಾಗಿ ನಾನೊಂದು ಸ್ಪಷ್ಟತೆ ಕೊಡ್ತೀನಿ. ಮನೆಯಲ್ಲಿ ನಾನು ವಿನಯ್, ನಮ್ರತಾ ಫ್ರೆಂಡ್ಸ್ ಆಗಿದ್ವಿ, ಆ ಕಡೆ ತನಿಷಾ, ಕಾರ್ತಿಕ್ ಮತ್ತು ಸಂಗೀತಾ ಸ್ನೇಹಿತರಾಗಿದ್ರು. ನಾವು ಕಡೆಯವರೆಗೂ ಒಟ್ಟಿಗೆ ಇದ್ವಿ, ಅವರು ಮಧ್ಯದಲ್ಲಿ ಕಿತ್ತಾಡ್ತಾರೆ ಮತ್ತೇ ಒಂದಾಗ್ತಾರೆ. ಅವರವರು ಫ್ರೆಂಡ್ಶಿಪ್ ಹೇಗೆ ನಿಭಾಯಿಸುತ್ತಾರೆ, ಆ ರೀತಿ ಬೇರೆ ಅಷ್ಟೇ" ಎಂದರು.
"ಇಲ್ಲಿ ನಮ್ಮ ಫ್ರೆಂಡ್ಶಿಪ್ ಸರಿ-ತಪ್ಪು ಅಂತ ಹೇಳಲು ಆಗೋದಿಲ್ಲ. ಮತ್ತೆ ಕಾರ್ತಿಕ್ ಹಾಗೂ ಸಂಗೀತಾ ಅಂತ ವಿಷಯ ಬಂದಾಗ, ಅವರಿಬ್ಬರ ಮಧ್ಯೆ ಏನಿದೆಯೋ ಅದು....." ಹೆಚ್ಚಿನ ವಿಷಯ ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕೆಳಗಿದೆ ವೀಕ್ಷಿಸಿ.