More

    ಮುಟ್ಟಿನ ನೋವು ಕಡಿಮೆ ಮಾಡಲು ನೋವು ನಿವಾರಕ ಮಾತ್ರೆ ಸೇವಿಸಿದ್ದ ಬಾಲಕಿ ಬ್ರೈನ್ ಡೆಡ್​​ನಿಂದ ಸಾವು

    ನವದೆಹಲಿ: ಮುಟ್ಟಿನ ನೋವು ತಡೆಯಲಾರದೆ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

    ಲೈಲಾ(16) ಮೃತ ಬಾಲಕಿ. ತನ್ನ ಸ್ನೇಹಿತರ ಸಲಹೆಯ ಮೇರೆಗೆ ಪ್ರತೀ ತಿಂಗಳು ನೋವು ನಿವಾರಕ ಮಾತ್ರೆ ಸೇವಿಸುತ್ತಿದ್ದ ಪರಿಣಾಮ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಸ್ನೇಹಿತರ ಸಲಹೆಯಂತೆ ಋತು ಸ್ರಾವದ ಮೊದಲ ದಿನದಿಂದ ಲೈಲಾ ಮಾತ್ರೆ ಸೇವಿಸಲು ಪ್ರಾರಂಭಿಸಿದ್ದಾಳೆ. ಆದರೆ ಸಾಮಾನ್ಯವಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಮಹಿಳೆಯರಲ್ಲಿ ನೋವು ಕಡಿಮೆಯಾಗುತ್ತಿತ್ತು. ಆದರೆ ಒಂದು ದಿನ ಈಕೆಯ ಮುಟ್ಟಿನ ನೋವು ಉಲ್ಬಣಗೊಂಡಿದೆ.

    ಪರಿಣಾಮ ಡಿಸೆಂಬರ್​​​ 05ರ ವೇಳೆಗೆ ಆಕೆಯ ಸ್ಥಿತಿ ಹದಗೆಟ್ಟಿತು. ಸ್ನಾನಗೃಹದಲ್ಲಿ ಕುಸಿದು ಬಿದ್ದರು ಮತ್ತು ಅವಳ ಕಾಲುಗಳಿಗೆ ಸ್ವಲ್ಪ ತೊಂದರೆಯಾಯಿತು. ನೋವಿನಿಂದ ಕಿರುಚಲು ಪ್ರಾರಂಭಿಸಿದಳು. ಕುಟುಂಬವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು.

    ಲೈಲಾ ವಿಪರೀತ ವಾಂತಿ ಭೇದಿ ಹಾಗೂ ತಲೆನೋವಿನಿಂದ ಬಳಲುತ್ತಿರುವುದನ್ನು ಕಂಡು ಪೋಷಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯ ತೀವ್ರ ಒದ್ದಾಟವನ್ನು ಕಂಡು ಸಿಟಿ ಸ್ಕ್ಯಾನ್ ಮಾಡಿಸಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದೆ. ಸಹ ಚಿಕಿತ್ಸೆ ಫಲಕಾರಿಯಾಗದೆ, ಮೆದುಳು ನಿಷ್ಕ್ರಿಯಗೊಂಡು ಬಾಲಕಿ ಸಾವನ್ನಪ್ಪಿದ್ದಾಳೆ.

    ಕುಟುಂಬವು ಲೈಲಾ ಅವರ ಅಂಗಗಳನ್ನು ದಾನ ಮಾಡಿದೆ. ಕ್ರಿಸ್‌ಮಸ್‌ಗೆ ಕೆಲವು ದಿನಗಳ ಮೊದಲು ಲಾಯ್ಲಾ ಅವರ ಅಂಗಗಳು ಐದು ಜೀವಗಳನ್ನು ಉಳಿಸಿವೆ ಎಂದು ವೈದ್ಯರು ಬಾಲಕಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

    ಹಿರಿಯ ನಟಿ ಹೇಮಾ ಚೌಧರಿ ಆರೋಗ್ಯಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts