ಹಿಂದು ಮಲಯಾಳಿ ಕ್ರಿಕೆಟ್ ಕಪ್‌ಗೆ ಚಾಲನೆ

ಮಡಿಕೇರಿ: ಕೊಡಗು ಹಿಂದು ಮಲಯಾಳಿ ಸಮಾಜಬಾಂಧವರಿಗೆ ಮಾದಾಪುರದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.


ಎಸ್‌ಎನ್‌ಡಿಪಿ ಅಧ್ಯಕ್ಷ ವಾಸು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕ್ರೀಡಾಕೂಟ ಆಯೋಜನೆ ಮಾಡಿರುವುದು ತುಂಬಾ ಸಂತೋಷವಾಗಿದೆ. ಕಾರಣ ಎಲ್ಲರೂ ತಮ್ಮ ತಮ್ಮ ಸಂಘ ಸಂಸ್ಥೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಆದರೆ, ಮಾದಾಪುರ ಹಿಂದೂ ಮಲಯಾಳಿ ಕುಟುಂಬ ವಿಶೇಷವಾಗಿದೆ. ಎಲ್ಲಾ ಮಲಯಾಳಿ ಬಾಂಧವರು ಒಂದು ಕಟುಂಬ ಎಂಬ ದೃಷ್ಟಿಯಿಂದ ಈ ಕ್ರೀಡೆ ಆಯೋಜನೆ ಮಾಡಿದ್ದಾರೆ. ಇದೇ ರೀತಿ ಮುಂದೆಯೂ ಯಶಸ್ವಿ ಕ್ರೀಡಾಕೂಟ ನಡೆಯಲಿ ಎಂದು ಹೇಳಿದರು.


ಶಿಕ್ಷಕಿ ಸರಳ ಮಾತನಾಡಿ, ಕ್ರೀಡಾಕೂಟ ಒಗ್ಗಟ್ಟನ್ನು ಮೂಡಿಸಲು ವೇದಿಕೆಯಾಗಿದೆ. ಮಲಯಾಳಿ ಕುಟುಂಬ ಆಯೋಜಿಸಿರುವ ಕ್ರಿಕೇಟ್ ಪಂದ್ಯಾವಳಿಯಲ್ಲಿ ಮಹಿಳೆಯರಿಗೂ ಅವಕಾಶ ನೀಡಿರುವುದು ಬಹಳ ಸಂತೋಷವಾಗಿದೆ ಎಂದರು.


ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಡಿ.ಪ್ರಕಾಶ್, ನಾಪೋಕ್ಲು ವಲಯ ಅಧ್ಯಕ್ಷ ಅನಿಲ್, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನು ಮುದ್ದಪ್ಪ, ಮಡಿಕೇರಿ ಹಿಂದು ಮಲಯಾಳಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲತ ರಾಜನ್, ಪ್ರಮುಖರಾದ ಉಷಾ ಮುರಳಿ, ಸುರೇಶ್ ಬಾವೆ, ಪುರುಷೋತ್ತಮ, ಕುಮಾರ, ಸರಳಕುಮಾರಿ, ಅನೂಪ್, ಪ್ರಭಾ, ಟಿ.ಕೆ.ರಾಜನ್, ಅಶೋಕ್ ಕಾರೆಕಾಡು, ದಾಸನ್ ಇತರರಿದ್ದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…