ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡ ಹಾವು! ಕತ್ತು ಹಿಸುಕಿಕೊಂಡ ಆಘಾತಕಾರಿ ಫೋಟೋ ವೈರಲ್

snake
Published on

 ನವದೆಹಲಿ: ಹಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹಾವುಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇತ್ತೀಚೆಗೆ ಹಾವೊಂದು ಆತ್ಮಹತ್ಯೆ ಮಾಡಿಕೊಂಡಿದೆ.  ಈ ಕುರಿತಾದ ಫೋಟೋ ವೈರಲ್​ ಆಗಿದೆ.

ಹಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ನೋಡಿದ ವ್ಯಕ್ತಿಯೊಬ್ಬರು ಆಘಾತಕ್ಕೊಳಗಾದರು ಮತ್ತು ಅದನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ, ಹಾವು ಸ್ವತಃ ಸುತ್ತಿಕೊಂಡು 10 ನಿಮಿಷಗಳ ನಂತರ ಕೊನೆಯುಸಿರೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಹಾವೊಂದು ಸುತ್ತಿಕೊಂಡಿರುವುದನ್ನು ಕಾಣಬಹುದು. ಹಾವು ತನ್ನ ಬಾಲದಿಂದ ಬಾಯಿ, ಕತ್ತನ್ನು ಬಿಗಿಯಾಗಿ ಹಿಡಿದಿತ್ತು. ಈ ಹಾವು ಆತ್ಮಹತ್ಯೆಗೆ ಯತ್ನಿಸಿದ 10 ನಿಮಿಷಗಳ ನಂತರ ಕತ್ತು ಹಿಸುಕಿ ಸಾವನ್ನಪ್ಪಿದೆ ಎಂದು ಫೋಟೋ ಶೇರ್ ಮಾಡಿದವರು ಹೇಳುತ್ತಿದ್ದಾರೆ.

ಈ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ, ಹತ್ತು ಹಲವು ಪ್ರಶ್ನೆ, ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರಾಣಿಗಳು ಮತ್ತು ಹಾವುಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದವು. ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡುವ ಬದಲು ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಈಗ ಜನರು ಕಾಮೆಂಟ್​​ ಮಾಡುತ್ತಾ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net