ನಾನು ಬಾತ್​​ರೂಮ್ ತೊಳೀಬೇಕಾ? ಶಾರುಖ್ ಪತ್ನಿಗೆ ಈ ಮಾತು ಹೇಳಿ! ಬಿಗ್​ಬಾಸ್​​ ಆಫರ್​ ಕೊಟ್ಟವರಿಗೆ ನಟನ ಪತ್ನಿಯ ಖಡಕ್​​ ಪ್ರಶ್ನೆ

sunita
Published on

ಮುಂಬೈ: ಸೂಪರ್‌ಸ್ಟಾರ್ ಗೋವಿಂದ ಪತ್ನಿ ಸುನಿತಾ ಅಹುಜಾ 4 ಬಾರಿ ಬಿಗ್ ಬಾಸ್ ಆಫರ್​ ರಿಜೆಕ್ಟ್ ಮಾಡಿದ್ದಾರೆ. ‘ಬಿಗ್ ಬಾಸ್’ ಆಫರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ರು. 4 ಬಾರಿ ಬಿಗ್ ಬಾಸ್ ಆಫರ್ ತಿರಸ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸುದ್ದಿ ವೈರಲ್​ ಆಗುತ್ತಿದೆ.

ಬಾಲಿವುಡ್​ನ ಸ್ಟಾರ್​ ನಟ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರಿಗೂ ಇತ್ತೀಚೆಗೆ ಬಿಗ್​ಬಾಸ್​​ ಮನೆಗೆ ಹೋಗ್ತಿರಾ? ಎಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಮಾತನಾಡುವಾಗ ಅವರು ಖಡಕ್​ ಆಗಿ ಮಾತನಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ನನಗೆ ಆಫರ್​ ನೀಡುತ್ತಿದ್ದಾರೆ.ನಿಮಗೇನು ಹುಚ್ಚು ಹಿಡಿದಿದೆಯಾ? ನಾನು ಬಿಗ್ ಬಾಸ್​ಗೆ ಹೋಗಿ ಟಾಯ್ಲೆಟ್​ ಕ್ಲೀನ್​ ಮಾಡ್ತೀನಿ ಅಂತ ನೀವು ಅಂದುಕೊಂಡಿದ್ದೀರಾ ಎಂದು ನಾನು ಅವರಿಗೆ ಕೇಳಿದೆ’ ಎಂದಿದ್ದಾರೆ ಸುನಿತಾ ಅಹುಜಾ.

‘ನಿಮಗೆ ಬಿಗ್​ ಬಾಸ್​ ಶೋನಿಂದ ಆಫರ್​ ಬಂದಿದೆಯಾ’ ಎಂದು ಪ್ರಶ್ನೆ ಮಾಡಿದ ಸಂದರ್ಶಕರಿಗೂ ಸುನಿತಾ ಅಹುಜಾ ಅವರು ಮರುಪ್ರಶ್ನೆ ಹಾಕಿದ್ದಾರೆ. ‘ನೀವು ನನಗೆ ಇಂಥ ಪ್ರಶ್ನೆ ಕೇಳುತ್ತೀರಲ್ಲ.. ಶಾರುಖ್​ ಖಾನ್​ ಪತ್ನಿ ಗೌರಿ ಖಾನ್​ಗೆ ಇದೇ ಪ್ರಶ್ನೆ ಕೇಳುತ್ತೀರಾ? ನಾವು ಆರ್ಥಿಕವಾಗಿ ಕಷ್ಟದಲ್ಲಿದ್ದೇವೆ ಅಂತ ನೀವು ಭಾವಿಸಿದ್ದೀರಾ? ನಾನು ಬಿಗ್​ ಬಾಸ್​ ಕಾರ್ಯಕ್ರಮವನ್ನೇ ನೋಡುವುದಿಲ್ಲ’ ಎಂದು ಸುನಿತಾ ಅಹುಜಾ ಅವರು ಹೇಳಿದ್ದಾರೆ. ಸುನೀತಾ ಅವರ ಈ ಹೇಳಿಕೆ ಸಖತ್​ ವೈರಲ್​​ ಆಗಿದೆ.

ಕರಣ್ ಜೋಹರ್ ನನ್ನನ್ನು ಕಾರ್ಯಕ್ರಮಕ್ಕೆ ಕರೆದ್ರೆ ಖಂಡಿತಾ ನಾನು ಹೋಗುತ್ತೇನೆ ಎಂದಿದ್ದಾರೆ. ಇಲ್ಲಿಯವರೆಗೆ ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸದ ಸ್ಟಾರ್ ಪತ್ನಿ, ಇದ್ರಿಂದ ತನಗೆ ಯಾವುದೇ ವ್ಯತ್ಯಾಸ ಆಗೋದಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net