ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಬೋಗಿಗೆ ನುಗ್ಗಿದ 'ಹಾವು'; ಭಯದಿಂದ ಮೆಟ್ರೋ ಸೀಟ್​ ಮೇಲೇರಿ ನಿಂತ ಪ್ರಯಾಣಿಕರು| delhi-metro

delhi
Published on

ದೆಹಲಿ: ಪ್ರಯಾಣಿಕರ ವಿಭಿನ್ನ ನಡವಳಿಕೆಯಿಂದ ಹೆಚ್ಚಾಗಿ ಸುದ್ದಿಯಾಗುವ ದೆಹಲಿ ಮೆಟ್ರೋ, ಇದೀಗ ಮತ್ತೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ಜಗಳಗಳು, ಆಹಾರ ಮತ್ತು ರೀಲ್ ವೈರಲ್ ವೀಡಿಯೊಗಳಿಗೆ ಹೆಸರುವಾಸಿಯಾದ ಮೆಟ್ರೋ, ದೈನಂದಿನ ವೇದಿಕೆಯಾಗಿದೆ. ಆದರೆ ಈ ಬಾರಿ ಪ್ರಯಾಣಿಕರ ಕಣ್ಣಿಗೆ ಹಾವೊಂದು ಕಾಣಿಸಿಕೊಂಡಿದೆ.

ಮೆಟ್ರೋದ ಮಹಿಳಾ ಬೋಗಿಯಲ್ಲಿ ನಡೆದ ಗದ್ದಲ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಲರೂ ಹಾವು ಹಾವು ಎನ್ನುತ್ತಾ ಸೀಟ್ ಮೇಲೆ ಹತ್ತಿ ನಿಂತಿದ್ದಾರೆ. ಆದರೆ ಈ ವಿಡಿಯೋದಲ್ಲೆಲ್ಲೂ ಮಾತ್ರ ಹಾವು ಕಂಡುಬಂದಿಲ್ಲ. ಭಯಭೀತರಾದ ಮಹಿಳೆಯರು ಕಿರುಚುತ್ತಾ ಸೀಟುಗಳ ಮೇಲೆ ಹಾರಿದ್ದಾರೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. delhi.metrolife ಎಂಬ ಪ್ರೊಫೈಲ್ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ

ಇನ್ನೂ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ, ಇದು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವು ವೀಕ್ಷಕರು ಹಾವಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಪರಿಸ್ಥಿತಿಯನ್ನು ಅಪಹಾಸ್ಯ ಮಾಡಿದರೆ, ಇನ್ನೂ ಕೆಲವರು ಇದನ್ನು ರಿಯಾಲಿಟಿ ಶೋ ದೃಶ್ಯಗಳಿಗೆ ಹೋಲಿಸಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net