Train ಎಂಜಿನ್​ನಲ್ಲಿ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಪರಾರಿಯಾದ Loco Pilot, ಸಹಾಯಕ; ಮುಂದೇನಾಯ್ತು ನೀವೇ ನೋಡಿ

Train Snake
Published on

ಪಟ್ನಾ: ರೈಲಿನ ಎಂಜಿನ್​ನಲ್ಲಿ (Train Engine) ಹಾವು ಕಾಣಿಸಿಕೊಂಡ ಪರಿಣಾಮ ಲೋಕೋ ಪೈಲಟ್​ ಹಾಗೂ ಅವರ ಸಹಾಯಕ ಟ್ರೈನಿನಿಂದ ಇಳಿದು ಓಡಿ ಹೋಗಿರುವ ಘಟನೆ ಬಿಹಾರದ ತರೆಗ್ನಾ ರೈಲು ನಿಲ್ದಾಣದಲ್ಲಿ ನಡೆದಿದೆ. ಪಟ್ನಾ-ಗಯಾ ಎಕ್ಸ್​​ಪ್ರೆಸ್​​ನಲ್ಲಿ ಈ ಘಟನೆ ನಡೆದಿದ್ದು, ರೈಲು ಒಂದು ಗಂಟೆ ತಡವಾಗಿ ನಿಲ್ದಾಣದಿಂದ ಹೊರಟಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು, ಪಲಾಮು ಎಕ್ಸ್​ಪ್ರೆಸ್​​ನಲ್ಲಿ ಈ ಘಟನೆ ನಡೆದಿದ್ದು, ಲೋಕೋ ಪೈಲಟ್​ ಸಂಜಯ್​ ಕುಮಾರ್​ ಹಾಗೂ ಅವರ ಸಹಾಯಕ ಎಂಜಿನ್​ನಲ್ಲಿ ಹಾವನ್ನು ಕಂಡು ಕೂಡಲೇ ರೈಲನ್ನು ನಿಲ್ಲಿಸಿ ಓಡಿ ಹೋಗಿದ್ದಾರೆ. ವಿಚಾರ ತಿಳಿದ ಪ್ರಯಾಣಿಕರು ಕೂಡ ರೈಲಿನಿಂದ ಇಳಿದಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಢಿದ್ದಾರೆ.

krait snake

ಎರಡು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದ್ದು, ಒಂದು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಯೌಆಗಿದೆ. ಲೋಕೋಪೈಲಟ್​  ಸಂಜಯ್​ ಅವರ ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅನೇಕರ ಜೀವ ಉಳಿಸಿದ್ದಾರೆ. ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಹಾವು ಕಾಣಿಸಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು, ಕಳೆದ ವಾರ ಉತ್ತರಪ್ರದೇಶದ ಝಾನ್ಸಿಯಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದ ಯುವಕನಿಗೆ ಹಾವು ಕಚ್ಚಿ ಇದಾದ ನಂತರ ಇಡೀ ಕೋಚ್‌ನಲ್ಲಿ ನೂಕುನುಗ್ಗಲು ಉಂಟಾಯಿತು. ಗ್ವಾಲಿಯರ್‌ನಲ್ಲಿ ರೈಲು ನಿಂತಾಗ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಸಲಾಗಿತ್ತು. ಇದಾದ ಬಳಿಕ ರೈಲಿನಲ್ಲಿ ಹಾವು ಕಾಣಿಸಿಕೊಂಡ ಅನೇಕ ಪ್ರಕರಣ ಬೆಳಕಿಗೆ ಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net