ಸೇಡು ತೀರಿಸಿಕೊಳ್ಳಲು ಯತ್ನಿಸಿ ತಾನೇ ಜೀವತೆತ್ತ ಹಾವು

Snake
Published on

ಚನ್ನಗಿರಿ: ಟಿವಿ ಧಾರಾವಾಹಿಯ ನಾಗಿಣಿ ಕಥಾನಕದ ದೃಶ್ಯ ಕಟ್ಟಿಕೊಟ್ಟಂತೆ ಚನ್ನಗಿರಿ ತಾಲೂಕು ದಿಗ್ಗೇನಹಳ್ಳಿಯಲ್ಲಿ ಶುಕ್ರವಾರ ಘಟನೆಯೊಂದು ಜರುಗಿದ್ದು, ಟ್ರ್ಯಾಕ್ಟರ್ ಚಕ್ರಕ್ಕೆ ಬಾಲ ಸಿಲುಕಿ ಸಿಟ್ಟಿಗೆದ್ದ ನಾಗರಹಾವು ಚಾಲಕನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸಿ ಕೊನೆಗೆ ತಾನೇ ಜೀವತೆತ್ತಿದೆ.

ಹೊನ್ನೇಬಾಗಿ ಗ್ರಾಮದ ಗ್ರಾಪಂ ಅಧ್ಯಕ್ಷ ರಾಜಪ್ಪ ದಿಗ್ಗೇನಹಳ್ಳಿ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಟ್ರ್ಯಾಕ್ಟರ್​ನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ನಾಗರಹಾವಿನ ಬಾಲದ ಮೇಲೆ ಚಕ್ರ ಹರಿದಿದೆ. ಸಿಟ್ಟಿಗೆದ್ದ ಹಾವು ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬಾಲಿಸಿ ಚಾಲಕ ಇರುವಲ್ಲಿಗೆ ಧಾವಿಸಿದೆ.

ಇದನ್ನು ಗಮನಿಸಿದ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿ ಓಡಿ ಹೋಗಿದ್ದಾನೆ. ಆತನ ಕೂಗಾಟ ಕೇಳಿ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಹಾವು ಟ್ರ್ಯಾಕ್ಟರ್​ನ ಸೀಟಿನ ಮೇಲೆ ಹತ್ತಿ ಗಂಟೆಗೂ ಹೆಚ್ಚುಕಾಲ ಬುಸುಗುಟ್ಟುತ್ತಾ ಕುಳಿತಿದೆ. ಹಾವು ಚಾಲಕನನ್ನು ಬಿಡುವುದಿಲ್ಲ ಎಂದು ಭಾವಿಸಿದ ಜನರು ಅದನ್ನು ಹೊಡೆದು ಕೊಂದುಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net