

ನವದೆಹಲಿ: ( Snake bites mans private parts ) ಹಾವು ಎಂದು ಹೇಳಿದ್ರೆ ಸಾಕು ಅನೇಕ ಜನರ ಉಸಿರು ಬಿಗಿಯಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಈ ವಿಷಕಾರಿ ಪ್ರಾಣಿಗೆ ಹೆದರುತ್ತಾರೆ. ವಿಷವಲ್ಲದಿದ್ದರೂ ಜನ ಅದನ್ನು ಕಂಡ ಕೂಡಲೇ ಅಲ್ಲಿಂದ ಓಡಿಹೋಗಲು ಯತ್ನಿಸುತ್ತಾರೆ. ಇಂಡೋನೇಷಿಯಾದ ಪ್ರಭಾವಿ ಅಂಗಾರ ಶೋಜಿ ಅಪಾಯಕಾರಿ ಹಾವುಗಳೊಂದಿಗೆ ಸಾಹಸ ಪ್ರದರ್ಶಿಸಲು ಪ್ರಸಿದ್ಧರಾಗಿದ್ದಾರೆ. ಆದರೆ, ಅವರ ಇತ್ತೀಚಿನ ವಿಡಿಯೋ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಭಾವಿ ಶೋಜಿ ಅವರ ಖಾಸಗಿ ಭಾಗವನ್ನು ಹಾವು ಕಚ್ಚಿದ್ದು, ನೋವಿನಿಂದ ಒದ್ದಾಡುತ್ತಿರುವುದನ್ನು ಕಾಣಬಹುದು. ಹಾವು ಅವನ ಸೂಕ್ಷ್ಮ ಅಂಗವನ್ನು ಕಚ್ಚಿ ಹಿಡಿದಿದೆ ಮತ್ತು ಶೋಜಿ ಅದರ ಹಿಡಿತದಿಂದ ತಪ್ಪಿಸಿಕೊಳ್ಳಲುಪ್ರಯತ್ನವನ್ನು ಮಾಡುತ್ತಿದ್ದಾನೆ. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ.
ಶೋಜಿ ಈ ಸಾಹಸವನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆಯೇ ಅಥವಾ ನಿಜವಾಗಿಯೂ ಹಾವಿನ ಈ ಭೀಕರ ದಾಳಿಗೆ ಬಲಿಯಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
@jejaksiaden ಎನ್ನುವ ಇನ್ಸ್ಟಾಗ್ರಾನ್ ಖಾತೆಯಿಂದ ಹಂಚಿಕೊಳ್ಳಲಾದ ಈ ವೀಡಿಯೊವನ್ನು ನೋಡಿ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದಾರೆ. ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ವೀಡಿಯೊವನ್ನು ನೋಡಿದ್ದಾರೆ. ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ,
ಶೋಜಿ ದಾಳಿಗೆ ಒಳಗಾದ ಕಪ್ಪು ಮತ್ತು ಪಟ್ಟೆ ಹಾವು ಮ್ಯಾಂಗ್ರೋವ್ ಹಾವು. ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಈ ಹಾವು ವಿಷಕಾರಿಯಾಗಿದೆ, ಆದರೆ ಅದರ ವಿಷವು ಮನುಷ್ಯರಿಗೆ ಮಾರಕವಲ್ಲ ಮ್ಯಾಂಗ್ರೋವ್ ಹಾವು ಕಚ್ಚಿದಾಗ ಊತ ಮತ್ತು ತೀವ್ರವಾದ ನೋವು ಆಗುತ್ತದೆ ಎನ್ನಲಾಗಿದೆ.