ಹಾವನ್ನು ಮುದ್ದಿಸಿದ ಎಮ್ಮೆ! ಪ್ರೀತಿಗೆ ಮರುಗಿತು ವಿಷಕಾರಿ ಬುಸ್​ ಬುಸ್​ ನಾಗಪ್ಪ

snake attack buffalo
Published on

ನವದೆಹಲಿ: ಹಾವುಗಳು ತುಂಬಾ ಅಪಾಯಕಾರಿ. ಮನುಷ್ಯರಷ್ಟೇ ಅಲ್ಲ.. ಹುಲಿ, ಸಿಂಹದಂತಹ ಕಾಡುಪ್ರಾಣಿಗಳೂ.. ಅಪಾಯಕಾರಿ ಹಾವಿನ ಹತ್ತಿರ ಹೋಗುವುದಿಲ್ಲ. ಆದರೆ ಇತ್ತೀಚೆಗೆ ಕಟ್ಟಿದ್ದ ಎಮ್ಮೆಯ ಬಳಿಗೆ ಹಾವೊಂದು ಹೋಗಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಹಾವುಗಳು ವಿಷಕಾರಿ ಜೀವಿಗಳು ಎಂದು ತಿಳಿದಿದೆ.ಕಾಡಿನ ರಾಜ ಎಂದೇ ಕರೆಸಿಕೊಳ್ಳುವ ಸಿಂಹ ಹೆಬ್ಬಾವು, ನಾಗರ ಹಾವುಗಳನ್ನು ಕಂಡರೆ ಭಯಗೊಂಡು ಎರಡು ಹೆಜ್ಜೆ ಹಿಂದೆ ಸರಿಯುತ್ತಿರುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ಇದೇ ರೀತಿಯ ಹಾವಿನ ವಿಡಿಯೋವೊಂದು ಹೊರಬರುತ್ತಿದೆ.

ಈ ವೀಡಿಯೊವನ್ನು Instagram ನಲ್ಲಿ @itz__akhil__5k ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಾವು ಮತ್ತು ಎಮ್ಮೆ ಮುಖಾಮುಖಿಯಾಗುತ್ತವೆ. ವಿಡಿಯೋದಲ್ಲಿ ಎಮ್ಮೆ ಎದುರು ಹಾವು ಬರುತ್ತದೆ. ಆದರೆ ಮರು ಕ್ಷಣವೇ ಹಾವು ಎಮ್ಮೆಯ ಮುಖಕ್ಕೆ ಕಚ್ಚುತ್ತದೆ. ಆದರೆ, ಎಮ್ಮೆ ಇಷ್ಟು ಪ್ರೀತಿಯಿಂದ ಹಾವಿನ ಬಳಿಗೆ ಬಂದು ಮುದ್ದಿಸಿದ್ದು ಅಚ್ಚರಿ ಮೂಡಿಸಿದೆ.

ಕೆಳಗಿನ ವಿಡಿಯೋದಲ್ಲಿ ಎಮ್ಮೆ ಹಾವನ್ನು ನೆಕ್ಕುವುದನ್ನು ನೀವು ನೋಡಬಹುದು. ಎಮ್ಮೆ ಈ ರೀತಿ ಮಾಡುವುದನ್ನು ನೋಡಿ ಹಾವು ಕೂಡ ಶಾಂತವಾಯಿತು.ಈ ಶಾಕಿಂಗ್ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾವನ್ನು ಅಲ್ಲಿಂದ ತೆಗೆಯುವ ಪ್ರಯತ್ನ ಮಾಡದೆ, ವಿಡಿಯೋ ತೆಗೆಯುತ್ತಿದ್ದಾರೆಂದು ದೂರುತ್ತಿದ್ದಾರೆ. ಇನ್ನು ಕೆಲವರು ಎಮ್ಮೆಯ ಯೋಗಕ್ಷೇಮದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಈ ವೀಡಿಯೋಗೆ ಇದುವರೆಗೆ 26 ಮಿಲಿಯನ್ ವೀಕ್ಷಣೆಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net