

ನವದೆಹಲಿ: ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಒಂದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಟ್ವೀಟ್ ಮಾಡುವುದಕ್ಕೂ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಸಚಿವೆ ಕಾಂಗ್ರೆಸ್ ನಾಯಕನಿಗೆ ಎಚ್ಚರಿಸಿದ್ದಾರೆ.
ಸೇನೆಯಲ್ಲಿ ಹೆಣ್ಣು ಗಂಡು ಎನ್ನುವ ಭೇದ-ಭಾವ ಮಾಡಬಾರದು, ಮಹಿಳೆಯರಿಗೆ ಭೂಸೇನೆಯಲ್ಲಿ ಶಾಶ್ವತ ಆಯೋಗ ರಚನೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ಕೊಟ್ಟ ಆದೇಶದ ಕುರಿತಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, "ಸರ್ಕಾರವು ಸೇನೆಯಲ್ಲಿ ಕಮಾಂಡ್ ಪೋಸ್ಟ್ಗಳನ್ನು ಹೆಣ್ಣು ಮಕ್ಕಳಿಗೆ ನೀಡದೇ ಮಹಿಳೆಯರಿಗೆ ಅಗೌರವ ಸೂಚಿಸುತ್ತಿತ್ತು. ಧೈರ್ಯವಾಗಿ ಎದ್ದು ನಿಂತು ಬಿಜೆಪಿ ಸರ್ಕಾರ ತಪ್ಪು ಎಂದು ತೋರಿಸಿದ್ದಕ್ಕೆ ಭಾರತದ ಎಲ್ಲ ಮಹಿಳೆಯರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದರು.
ರಾಹುಲ್ ಗಾಂಧಿಯ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ, "ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಆಯೋಗ ರಚನೆಯನ್ನು ಘೋಷಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು. ನಿಮ್ಮ ಸರ್ಕಾರ ಅದರ ಬೆರಳನ್ನು ತಿರುಚಲು ಪ್ರಯತ್ನಿಸಿದಾಗ ಬಿಜೆಪಿ ಮಹಿಳಾ ಮೋರ್ಚಾ ಆ ವಿಚಾರವನ್ನು ಕೈಗೆತ್ತುಕೊಂಡಿತು. ಟ್ವೀಟ್ ಮಾಡುವ ಮೊದಲು ಪರಿಶೀಲನೆ ಮಾಡಿಕೊಳ್ಳಿ." ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್)