ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕರೊನಾ ಸೋಂಕು

Smriti irani 2 vvani
Published on

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕರೊನಾ ಸೋಂಕು ತಗುಲಿದೆ. ಇಂದು ಟ್ವೀಟ್​ ಮಾಡಿ, ತಮಗೆ ಕೊವಿಡ್​-19 ತಗುಲಿದ್ದಾಗಿ ಅವರು ತಿಳಿಸಿದ್ದಾರೆ.

ಯಾವುದೇ ವಿಚಾರವನ್ನಾದರೂ ಘೋಷಣೆ ಮಾಡುವಾಗ ನಾನು ಶಬ್ದಗಳಿಗಾಗಿ ಹುಡುಕುವುದು ತುಂಬ ಕಡಿಮೆ. ಅತ್ಯಂತ ಸರಳವಾಗಿ ಹೇಳಬೇಕಾದ ವಿಷಯ ಹೇಳುತ್ತೇನೆ. ಹಾಗೇ ಇದೀಗ ನನಗೆ ಕೊವಿಡ್​-19 ಸೋಂಕು ತಗುಲಿದ್ದನ್ನೂ ಅಷ್ಟೇ ಸರಳವಾಗಿ ವಿವರಿಸುತ್ತಿದ್ದೇನೆ. ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಕೂಡಲೇ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸ್ಮೃತಿ ಇರಾನಿ ಟ್ವೀಟ್​ ಮಾಡಿದ್ದಾರೆ.

ಸ್ಮೃತಿ ಇರಾನಿಯವರು ಕಳೆದ ಹಲವು ದಿನಗಳಿಂದಲೂ ಬಿಹಾರ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಜ್ಯದ ಗೋಪಾಲ್​ಗಂಜ್​, ನೌಟಾನ್​, ಕಲ್ಯಾಣ್​ಪುರ್​, ದಿಘಾ, ಬೋಧ್​ಗಯಾ ಸೇರಿ ಹಲವು ಕಡೆಗಳಲ್ಲಿ ಪ್ರಚಾರಸಭೆಯಲ್ಲಿ ಮಾತನಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net