ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

Snake
Published on

ನವದೆಹಲಿ: ಚಿತ್ರದಲ್ಲಿ ಹಾವನ್ನು ಗುರುತಿಸಿ ಎಂಬ ನೂರಾರು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಿರುತ್ತವೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ. ಸಾವಿಗೀಡಾದವರು ಸಹ ಇದ್ದಾರೆ. ಹೀಗಿದ್ದರೂ ಚಿತ್ರಗಳಲ್ಲಿ ಹಾವು ಪತ್ತೆ ಹಚ್ಚುವ ಟಾಸ್ಕ್​ ಮಾತ್ರ ನೆಟ್ಟಿಗರಿಗೆ ಮಜಾ ಕೊಡುವುದಂತೂ ಸುಳ್ಳಲ್ಲ.

'ಸ್ಟಾಟ್​ ದಿ ಸ್ನೇಕ್ಸ್​ ಸಂಡೇ'​ ಹೆಸರಿನ ವಾರದ ಗೇಮ್​​ನಲ್ಲಿ ಈ ಬಾರಿಯು ಹೆಬ್ಬಾವು ಗುರುತಿಸುವ ಟಾಸ್ಕ್​ ನೆಟ್ಟಿಗರ ಮೆದುಳಿಗೆ ಕೈಹಾಕಿದೆ. ಹುಲ್ಲುಗಳೇ ತುಂಬಿರುವ ಮೈದಾನದಲ್ಲಿ ಅಡಗಿ ಕುಳಿರುವ ಹೆಬ್ಬಾವನ್ನು ಗುರುತಿಸುವುದು ಅಷ್ಟು ಸುಲಭವೇನಲ್ಲ.

ಅನೇಕರು ಗುರುತಿಸುವ ಪ್ರಯತ್ನ ಮಾಡಿ ಸುಸ್ತಾಗಿದ್ದಾರೆ. ಹುಲ್ಲಿನ ಒಳಗೆ ಗುರುತಿಸುವುದು ತುಸು ಕಷ್ಟವೇ ಎಂದಿದ್ದಾರೆ. ಇನ್ನು ಕೆಲವರು ತಪ್ಪಾಗಿ ಮಾರ್ಕ್​ ಮಾಡಿ ಕಳುಹಿಸಿದ್ದಾರೆ. ವಾಹ್ ನಿಮಗೆ ತುಂಬಾ ದೊಡ್ಡ ಕಣ್ಣುಗಳಿವೆ. ನಾನು ಹೆಬ್ಬಾವನ್ನು ಕನ್ನಡಕದಿಂದಲೂ ನೋಡಲಾಗುತ್ತಿಲ್ಲ ಎಂದು ಇನ್ನೊಬ್ಬ ವ್ಯಕ್ತಿ ಕಮೆಂಟಿಸಿದ್ದಾರೆ.

ಹದ್ದಿನ ಕಣ್ಣನ್ನು ಹೊಂದಿರುವ ಕೆಲವೇ ವ್ಯಕ್ತಿಗಳಿಂದ ಮಾತ್ರ ಹೆಬ್ಬಾವು ಎಲ್ಲಿದೆ ಎಂದು ಊಹಿಸಲು ಸಾಧ್ಯವೆಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಅನೇಕ ನೆಟ್ಟಿಗರು ಹಾವು ಪತ್ತೆಹಚ್ಚಲು ಹೋಗಿ ತಲೆಗೆ ಹುಳ ಬಿಟ್ಟಿಕೊಂಡು ಕೊನೆಗೆ ಉತ್ತರ ನೀವೇ ಹೇಳಿ ಪ್ಲೀಸ್​ ಎಂದು ಕಮೆಂಟಿಸಿದ್ದಾರೆ.

ಚಿತ್ರದಲ್ಲಿ ಹಾವು ಇರುವುದನ್ನು ಮಾರ್ಕ್​ ಮಾಡಿ ಸನ್​ಶೈನ್​ ಕೋಸ್ಟ್​ ಸ್ನೇಕ್​ ಕ್ಯಾಚರ್ಸ್​ ಶೇರ್​ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ಈ ಕೆಳಗೆ ನೀವು ನೋಡಬಹುದಾಗಿದೆ.

ಗುರುತು ಮಾಡಿರುವ ಚಿತ್ರವನ್ನು ನೋಡಿರುವ ನೆಟ್ಟಿಗನೊಬ್ಬ ಈಗಲೂ ನನಗೇನು ಕಾಣುತ್ತಿಲ್ಲ. ನಿಜಕ್ಕೂ ನಾನು ಅಸಹಾಯಕನೆಂದು ಕಮೆಂಟಿಸಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net