ಪ್ರೀತಿಸಿ ಮದುವೆಯಾದ ದಂಪತಿ ಮೇಲೆ ರಾಡ್​ನಿಂದ ಹಲ್ಲೆ; ಮಹಿಳೆ ಸ್ಥಳದಲ್ಲೇ ಸಾವು

Couple
Published on

ಕೊಪ್ಪಳ: ದಂಪತಿಯ ಮೇಲೆ ರಾಡ್​ನಿಂದ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಕಾರಟಗಿ ನಗರದಲ್ಲಿ ನಡೆದಿದೆ.ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಪತ್ನಿ ತ್ರಿವೇಣಿ (28) ಖಾಸಗಿ ಬ್ಯಾಂಕ್​​ನಲ್ಲಿ ಉದ್ಯೋಗಿ. ಇವರ ಪತಿ ವಿನೋದ್​ (35) ಖಾಸಗಿ ಬ್ಯಾಂಕ್​ ಕಾರಟಗಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ವಿವಾಹಕ್ಕೆ ಯುವತಿ ಮನೆಯವರ ವಿರೋಧವಿತ್ತು.

ದುಷ್ಕರ್ಮಿಗಳು ಇಂದು ಇವರ ಮನೆ ಹತ್ತಿರವೇ ಬಂದು ಹಲ್ಲೆ ಮಾಡಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿತರ ಚಲನವಲನ ಸೆರೆಯಾಗಿದ್ದು, ಚಹರೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್​ಟಿ ಶ್ರೀಧರ್​, ಗಂಗಾವತಿ ಡಿವೈಎಸ್​ಪಿ ಆರ್​.ಎಸ್​.ಉಜ್ಜಿನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net