

ಕೋಲಾರ: ಭಾರತವನ್ನು 4ನೇ ಔದ್ಯೋಗಿಕ ಕ್ರಾಂತಿಗೆ ಸಿದ್ಧಪಡಿಸುವ ಆಶಯದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿರುವುದರಿಂದ 2030ರೊಳಗೆ ಶೇ.51 ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ಅನುಷ್ಠಾನಗೊಳಿಸಲು ಸಾಧ್ಯವಾಗಬಹುದು ಎಂದು ಗಣಿತ ಸಂವಹನಕಾರ ಮತ್ತು ಖ್ಯಾತ ಒರಿಗಾಮಿ ತಜ್ಞ ವಿ.ಎಸ್.ಎಸ್.ಶಾಸಿ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಹೊರವಲಯದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಬುಧವಾರ ಗಣಿತಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಗಣಿತ ತಜ್ಞ ಶ್ರೀನಿವಾಸ ರಾವಾನುಜನ್ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ವಾತನಾಡಿ, ಗಣಿತ ಕಷ್ಟವೆಂಬ ಭಾವನೆ ಹೋಗಲಾಡಿಸಿ ಆಪ್ಯಾಯವಾನಗೊಳಿಸುವ ನಿಟ್ಟಿನಲ್ಲಿ ಒರಿಗಾಮಿ ಕಲೆ ಹೆಚ್ಚು ಸಹಕಾರಿ ಎಂದು ಪ್ರತಿಪಾದಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ 6ನೇ ತರಗತಿ ವಿದ್ಯಾರ್ಥಿಗಳು ಇಂಟರ್ನ್‌ಷಿಪ್ ವಾಡಲು ಅವಕಾಶ ಕಲ್ಪಿಸಲಾಗಿದೆ, ಇದರಿಂದ ಮಕ್ಕಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಹಾಗೂ ಕೌಶಲದ ಮೂಲಕ ಒಳ್ಳೆಯ ಅವಕಾಶ ಪಡೆಯಬಹುದು ಎಂದರು.
ಈಗಿನ ಶಿಕ್ಷಣ ವ್ಯವಸ್ಥೆಯಿಂದ ಗಣಿತದ ಹಾದಿ ದುರಂತದಲ್ಲಿದೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಹಂತದಲ್ಲಿ ಗಣಿತಕ್ಕೆ ಆಕರ್ಷಣೆ ಇಲ್ಲದ ಕಾರಣ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆಯಂತಾಗಿದ್ದು, ಇದನ್ನು ನಿವಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಒಳ್ಳೆಯ ಗಣಿತ ತಜ್ಞರನ್ನು ತಯಾರು ವಾಡಬೇಕು ಎಂದರು.
ಎನ್‌ಇಪಿಯಲ್ಲಿ ನಾನು ಒಬ್ಬ ಸದಸ್ಯನಾಗಿದ್ದೇನೆ. ಒರಿಗಾಮಿಯನ್ನು ಗಣಿತಕ್ಕೆ ಒಗ್ಗಿಸುವುದು ಹೇಗೆ ಎಂಬ ಕೌಶಲ ರೂಪಿಸಬೇಕು. ಆಟಿಕೆಗಳ ಮೂಲಕ ಗಣಿತ ಸುಲಭಗೊಳಿಸಿ ಮಕ್ಕಳಲ್ಲಿ ಗಣಿತ ಕಲಿಕಾಸಕ್ತಿ ಹೆಚ್ಚಿಸಬಹುದು ಎಂದರು.
ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ ವಾನಳ್ಳಿ ವಾತನಾಡಿ, ಒರಿಗಾಮಿ ಕಲೆ ಮೂಲಕ ಗಣಿತವನ್ನು ಜನಪ್ರಿಯಗೊಳಿಸುವ ಸಾಧಕರಲ್ಲಿ ಶಾಸ್ತ್ರಿಯವರೂ ಒಬ್ಬರು. ಅವರ ಗಣಿತದ ಆಧಾರದೊಂದಿಗೆ ಕಾಗದ ಕತ್ತರಿಸುವ ಕಲೆಯಲ್ಲೂ ವಿಶೇಷತೆ ಕಾಣಬಹುದು. ಅವರ ಜೀವನಾಧಾರಿತ ಚಲನಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಿ ಎಂದು ಸಲಹೆ ನೀಡಿದರು.
ವಿವಿ ಕುಲಸಚಿವ ಜನಾರ್ಧನಂ, ಮಂಗಸಂದ್ರ ಗ್ರಾಮದಲ್ಲಿರುವ ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಾ.ಡಿ.ಕುಮುದಾ, ವಿವಿ ಆರ್ಥಿಕ ಅಧಿಕಾರಿ ವಸಂತ ಕುವಾರ್, ಗಣಿತ ವಿಭಾಗದ ಮುಖ್ಯಸ್ಥೆ ಸಿ.ಎಸ್.ಶ್ರೀಲತಾ, ಗಣಿತ ಉಪನ್ಯಾಸಕ ಶಿವರಾಜ್ ಇನ್ನಿತರರಿದ್ದರು.