

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಕೌಶಲ ವೃದ್ಧಿಯಿಂದ ಕಾಸಿಗೆ ದಾರಿ...
ಮಾಹಿತಿ ತಂತ್ರಜ್ಞಾನ ಕ್ಷೇತ್ರ ದಿನೇದಿನೆ ಬೇರೆ ಬೇರೆ ರೂಪ ಪಡೆಯುತ್ತಿದೆ. ಇವತ್ತು ಇದ್ದಿದ್ದು ನಾಳೆ ಇರಲ್ಲ. ಕರ್ನಾಟದಲ್ಲಿ ಮಾನವ ಸಂಪನ್ಮೂಲ ಚೆನ್ನಾಗಿದ್ದರೂ ಶೈಕ್ಷಣಿಕ ಮಟ್ಟ ಮತ್ತು ಕೆಲಸಕ್ಕೆ ಬೇಕಾದ ಅರ್ಹತೆಯಲ್ಲಿ ವ್ಯತ್ಯಾಸ ಇದೆ. ಅಗತ್ಯ ಕೌಶಲ ಸಿಗದಿದ್ದರೆ ಅನ್ಎಂಪ್ಲಾಯಬಲ್ ಗ್ರಾಜುಯೇಟ್ಗಳನ್ನು ಸೃಷ್ಟಿಸಿದಂತಾಗುತ್ತದೆ. ಪದವಿ ಪಡೆದರೆ ಸಾಲದು; ಸ್ಕಿಲ್ಲಿಂಗ್ ಮತ್ತು ರೀಸ್ಕಿಲ್ಲಿಂಗ್ ಅತಿ ಮುಖ್ಯ. ಉದ್ಯೋಗಾಕಾಂಕ್ಷಿಗಳು ಸ್ಕಿಲ್ಲಿಂಗ್ನತ್ತ ವಿಶೇಷ ಗಮನ ಹರಿಸಬೇಕು. ಹೊಸ ಹೊಸ ತಂತ್ರಜ್ಞಾನ ಬರುತ್ತಿದೆ, ಅದರ ಬಗ್ಗೆ ಅರಿಯುವುದು ಮುಖ್ಯ. ಸರ್ಕಾರ ಕೂಡ ಉದ್ಯೋಗಾಕಾಂಕ್ಷಿಗಳಿಗೆ ಸಬ್ಸಿಡಿಯಲ್ಲಿ ಕೌಶಲ ಕಲಿಸುವ ಕೆಲಸ ಮಾಡಬೇಕು. ಆರ್ಕಿಟೆಕ್ಟ್ಗಳಿಗೆ ಮುಂಚೆ ಸಿವಿಲ್ ಕ್ಷೇತ್ರದಲ್ಲಿ ಮಾತ್ರ ಅವಕಾಶ ಇರುತ್ತಿತ್ತು. ಇಂದು ತ್ರಿಡಿ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಅವರ ಅವಕಾಶ ವಿಸ್ತಾರವಾಗುತ್ತಿದೆ. ಹೆಲ್ತ್ ಟೆಕ್, ಅಗ್ರಿ ಟೆಕ್, ಮಷಿನ್ ಲರ್ನಿಂಗ್, ಅನಿಮೇಷನ್, ಗೇಮಿಂಗ್, ಬಯೋಟೆಕ್, ಎಜುಟೆಕ್ ಇವೆಲ್ಲವೂ ಕರೊನೋತ್ತರ ಯುಗದಲ್ಲಿ ಎಮರ್ಜಿಂಗ್ ಕ್ಷೇತ್ರಗಳು. ಕರೊನಾ ಸಂದರ್ಭದಲ್ಲಿ ಆನ್ಲೈನ್, ಆಫ್ಲೈನ್ ಗೇಮಿಂಗ್ ಹೆಚ್ಚಾಗಿದೆ. ಆದ್ದರಿಂದ ಆ ಕ್ಷೇತ್ರಕ್ಕೆ ಇನ್ನಷ್ಟು ವಿಸ್ತಾರಗೊಳ್ಳುವ ಅವಕಾಶ ಸಿಕ್ಕಿದೆ. ಗೇಮಿಂಗ್ ಬೆಳೆಯಲು ತ್ರಿಡಿ ಮತ್ತು ಆಪ್ ಡೆವಲಪ್ವೆುಂಟ್ ಅತ್ಯಗತ್ಯ. ಅದನ್ನು ಕಲಿತವರು ಸ್ವಉದ್ಯಮ ಪ್ರಾರಂಭಿಸಬಹುದು, ಇಲ್ಲವೆ ಆ ಕ್ಷೇತ್ರದಲ್ಲಿ ಉದ್ಯೋಗವಾದರೂ ಪಡೆಯಬಹುದು. ಆನ್ಲೈನ್ನಲ್ಲಿ ವೈಜ್ಞಾನಿಕವಾಗಿ ಮಾಹಿತಿ ನೀಡುವಂಥ ಅಗ್ರಿಟೆಕ್ ಮತ್ತು ಎಜುಟೆಕ್ಗೆ ಸಾಕಷ್ಟು ಬೇಡಿಕೆ ಇದೆ. ಜನರ ಮನಸ್ಥಿತಿ ಅರಿತು ಉದ್ಯಮ ಆರಂಭಿಸಬಹುದು. ಜನರ ಕೈಯಲ್ಲಿ ಸ್ಮಾರ್ಟ್ ಫೋನ್ ಸಾಮಾನ್ಯವಾಗಿರುವ ಕಾರಣ ಇಂಥವಕ್ಕೆ ಬೇಡಿಕೆ ಇದ್ದೇ ಇದೆ.
| ಪ್ರಿಯಾಂಕ್ ಖರ್ಗೆ ಶಾಸಕ, ಐಟಿ, ಬಿಟಿ ಖಾತೆ ಮಾಜಿ ಸಚಿವ