

ಧನ್‌ಬಾದ್: ಆಘಾತಕಾರಿ ಘಟನೆಯೊಂದರಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಆರು ಜನ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಧನಬಾದ್‌ನಲ್ಲಿ ನಡೆದಿದೆ.
ರಾಂಚಿಯಿಂದ ಸುಮಾರು 145 ಕಿಮೀ ದೂರದಲ್ಲಿರುವ ನಿಚಿತ್‌ಪುರ ರೈಲು ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ 11:40 ಗಂಟೆ ಆಸುಪಾಸಿನಲ್ಲಿ 12 ಗುತ್ತಿಗೆ ಕಾರ್ಮಿಕರು ವಿದ್ಯುತ್ ಕಂಬದ ಕೆಲಸವನ್ನು ಮಾಡುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.
ಜಾರ್ಖಂಡ್‌ನ ಗೊಮೊಹ್-ನಿಚಿತ್‌ಪುರ ರೈಲ್ವೆ ಮಾರ್ಗದ ಜಾರ್ಖೋರ್ ಗೇಟ್ ಬಳಿ ಕೆಲಸ ಮಾಡುತ್ತಿದ್ದ ವೇಳೆ ಹೈ-ಟೆನ್ಶನ್ ವಿದ್ಯುತ್ ತಂತಿಯೊಂದು ಬಿದ್ದ ಪರಿಣಾಮ ಕಾರ್ಮಿಕರು ಮೃತಪಟ್ಟಿದ್ದು, ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)